ಯಜಮಾನ - ನವಿಲೇ ಪಂಚರಂಗಿ ನವಿಲೇ
ಚಿತ್ರ: ಯಜಮಾನ
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ದೇವನ್, ನಂದಿತ
ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತಕೋಂ
ಈ ತುಂಟು ವಯಸು
ಯಾತಕೋ ನಿಲ್ಲದು ಮನಸು
ಕೋಂ ತಕೋಂ
ಈ ತುಂಟು ವಯಸು
ಯಾತಕೋ ನಿಲ್ಲದು ಮನಸು
ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
---
ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿ ಬೀರಲ,
ಅಲ್ಲಿ ಕೊಂಚ ಇಲ್ಲಿ ಕೊಂಚ ||೨||
ಹುಚ್ಚು ಬಿಡುವ ಮುಂಚೆ ಹಚ್ಚಿ ಬಿಡಲಾ
ನನ್ನೆದೆಯೆ ಪರಪಂಚ ||೨||
ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ
ಏರುಪೇರು ಆಗದು ಎಂದು
ಹೃದಯ ಒಂದೆ ಮುಷ್ಟಿ
ಅದಕಿಂದು ನೇರ ದೃಷ್ಟಿ
ಆ ಸೃಷ್ಟಿಯೊಳಗೆ ಜೀವಾ
ಬೆಳೆಸುವುದು ವಂಶವೃಷ್ಠಿ
ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
---
ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇರುವ
ನಿನ್ನ ಲಜ್ಜೆ ಸಿಹಿ ಸಜ್ಜೆ ||೨||
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ
ಕಾಯುತೀನಿ ಪ್ರತಿ ಸಂಜೆ ||೨||
ಲೋಕಕಷ್ಟೆ ರಾತ್ರಿ ಹಗಲು
ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು
ಐಶ್ವರ್ಯ ನಮ್ಮ ಪ್ರೀತಿ
ಇಡಿ ಸ್ವರ್ಗ ತೋಳಿನಲ್ಲೇ
ಆಶ್ಚರ್ಯವಾಗೋ ರೀತಿ
ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ ನನ್ನ ಎದೆಯ ಒಳಗೆ ಇಟ್ಟೆ
ಅದರ ಹೃದಯ ತೆಗೆದು ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋಂ ತತೋಮ್
ಈ ಸುಪ್ತ ವಯಸು
ಯಾತಕೋ ನಿಲ್ಲದು ಮನಸು
ಕೋಂ ತತೋಮ್
ಇದು ತುಂಟು ವಯಸು
ಯಾತಕೋ ನಿಲ್ಲದು ಮನಸು
ಕೋಂ ತತೋಮ್
ಈ ತುಂಟು ವಯಸು
ಇದು ಯಾತಕೋ ನಿಲ್ಲದು ಮನಸು
ಲಾ ಲಲ್ಲ ಲಾ ಲಲಾ ಲಲಲ
ಲಾ ಲಲ್ಲ ಲಾ ಲಾಲಾಲಲಲ