ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲಿಬಾಬ

ವಿಕಿಸೋರ್ಸ್ದಿಂದ

ಸಾವಿರದ ಒಂದು ರಾತ್ರಿಗಳು ಎಂಬ ಗ್ರಂಥದಲ್ಲಿ ಬರುವ ಆಲಿಬಾಬ ಮತ್ತು ನಲವತ್ತು ಜನ ಕಳ್ಳರು ಎಂಬ ಜನಪ್ರಿಯ ಕಥೆಯ ನಾಯಕ. ಬಹಳ ಬಡವ. ಸೌದೆ ಕಡಿದು ತಂದು ಮಾರಿ ಜೀವಿಸುತ್ತಿದ್ದ. ಒಂದು ದಿನ ಕಳ್ಳರ ಗುಂಪೊಂದು ಬೆಟ್ಟದ ಗುಹೆಯೊಂದರಲ್ಲಿ ತಾವು ತಂದ ಲೂಟಿಯನ್ನು ಬಚ್ಚಿಡುತ್ತಿದ್ದುದನ್ನು ಕಂಡು ಕುತೂಹಲದಿಂದ ಗುಹೆಯನ್ನು ಪ್ರವೇಶಿಸಿ ಅಪಾರವಾದ ಹಣ ತಂದು ಚೆನ್ನಾಗಿ ಬದುಕುತ್ತಾನೆ. ಇದನ್ನು ತಿಳಿದ ಕಳ್ಳರು ವಂಚನೆಯಿಂದ ಇವನನ್ನು ಕೊಲ್ಲಲು ಪಿತೂರಿ ಮಾಡುತ್ತಾರೆ. ಆದರೆ ಆಲಿಬಾಬ ತನ್ನ ದಾಸಿ ಮಾರ್ಜಿಯಾನಳೊಂದಿಗೆ ಉಪಾಯ ಹೂಡಿ ಅವರನ್ನು ಸದೆಬಡಿಯುತ್ತಾನೆ. ಕಥೆ ನೀತಿಬೋಧಕವಾಗಿಯೂ ರಮ್ಯವಾಗಿಯೂ ಇದೆ.