ಮನವು ಮಹದೊಳಗೆ ಲೀಯವಾಗಿ ಘಟವಿಡಿದು ಸುಳಿದಾಡುವ ಮಹಾಮಹಿಮಂಗೆ ಅಹುದಾಗದೆಂಬ ಭ್ರಾಂತೇಕೊ ಹಿಡಿತಹುದು ಬಾರದಡೆ ಶಿರವನರಿದು ತಹುದು. ಕೂಡಲಸಂಗಮದೇವರು ಬಲ್ಲಂತೆ ಮಾಡಲಿ.