ಎಲ್ಲಿ ನೀನೇ ನೋಡಿದಡಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಎಲ್ಲಿ ನೋಡಿದಡಲ್ಲಿ ನೀನೇ ದೇವ. ಎಲ್ಲಿ ಮುಟ್ಟಿದಡಲ್ಲಿ ನೀನೇ ದೇವ. ಎಲ್ಲಿ ನೆನೆದಡಲ್ಲಿ ನೀನೇ ದೇವ. ಎಲ್ಲಿ ಭಾವಿಸಿದಡಲ್ಲಿ ನೀನೇ ದೇವ. ಎಲ್ಲೆಡೆಯಲ್ಲಿ ನಿಮ್ಮ ಮಹಾಪ್ರಭೆ ಮುಸುಕಿತ್ತಾಗಿ ಅಖಂಡೇಶ್ವರಾ
ನಾನು ನೀನೆಂಬುದಕ್ಕೆ ತೆರಹಿಲ್ಲ ದೇವಾ.