ಮಾತ್ರ ಸಂಗೀತದ ಮೇಲೆ ಮಮತೆ. ಆದ್ದರಿಂದ ನನ್ನನ್ನು ಆಗಾಗ ಹಾಡೆಂದು ಹೇಳಿ ನನಗೆ ಉತ್ತೇಜನ ಕೊಡುತ್ತಿದ್ದರು. ರಾಮ ಹಾಡನೆಂದು ನಮ್ಮ ತಾಯಿಗೂ ಗೊತ್ತಿರಲಿಲ್ಲ. ಅವನು ತಾಯಿಯ ಬಳಿ ಅಷ್ಟು ಸೇರುತ್ತಲೂ ಇರಲಿಲ್ಲ, ಈ ಭೇದಭಾವನೆಯು ರಾಮಗೂ ನನಗೇ ಗೊತ್ತಿದ್ದ ವಿಷಯ ಅದನ್ನು ನಾವು ನಮ್ಮ ನಮ್ಮಲ್ಲೇ ಚರ್ಚಿಸಿ ಸುಮ್ಮನಾಗುತ್ತಿದ್ದೆವು.
ಮತ್ತೊಂದು ವಿಶೇಷವೇನೆಂದರೆ. ನಮ್ಮಿಬ್ಬರಲ್ಲಿ ಯಾರೊಬ್ಬರು ದೇಹಾಲಸ್ಯವಾಗಿ ಮಲಗಿದ್ದರೆ ಮತ್ತೊಬ್ಬನು ಅವನಿಗೆ ಮೇಲಾಗುವವ ರೆಗೂ ಸಂಕಟದಿಂದ ಒದ್ದಾಡುತ್ತಿದ್ದನು. ಒಬ್ಬನಿಗೆಲ್ಲಾದರೂ ಘಾಯ ವಾದರೆ, ಮತ್ತೊಬ್ಬನಿಗೆ ಅದೇ ಸ್ಥಳದಲ್ಲಿ ನೋವು ಕಾಣುತ್ತಿತ್ತು. ನನ್ನ ಕನಸಿನಲ್ಲೆಂದಾದರೂ ಅವನನ್ನು ಕಂಡರೆ ಅವನಿಂದ ನಾನೇನಾದರೂ ಒಳ್ಳೆಯ ಸುದ್ದಿಯಾಗಲೀ ಕೆಟ್ಟುದಾಗಲೀ ಕೇಳುತ್ತಿದ್ದೆ. ಅವನಿಗೂ ಹೀಗೆಯೇ ಆಗುತ್ತಿದ್ದಿತು, ಈ ವಿಚಿತ್ರ ಅನುಭವದ ಕಾರಣವು ನಮಗೆ ಎಂದೂ ಗೊತ್ತಾಗುತ್ತಿಲಿಲ್ಲ.
ಒಂದಿಗೇ ಬೆಳೆದೆವು. ಒಂದಿಗೆ ಓದಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದೆವು. ನಮಗೆ ಮೆಟ್ರಿಕ್ ಪರೀಕ್ಷೆಯು ಮುಗಿದು ರಜಾ ಕಾಲ ಬಂದಿತು. ಒಂದು ದಿನ ಸಂಗೀತದ ಮೇಲೆ ನನಗೂ ರಾಮಗೂ ದೊಡ್ಡ ಚರ್ಚೆಯಾಯಿತು. ಆಗ ರಾಮಗೆ ನಾನು ಬೊಂಬಾಯಿಗೆ ಹೋಗಿ ಸಂಗೀತ ಕಲಿಯಬೇಕೆಂದು ಹೇಳಿ, ಅದಕ್ಕವನು ಸಹಾಯ ಮಾಡಬೇಕೆಂದು ಕೇಳಿದೆ. ರಾಮ ಒಪ್ಪಿಕೊಂಡ. ನಮ್ಮ ತಾಯಿ ಯನ್ನು ಕಂಡು ನನ್ನ ಆಶೆಯನ್ನು ಹೇಳಿದೆ. ಅವರು ದೊಡ್ಡಣ್ಣನಿಗೆ ಹೇಳಿದರು. ಅವನೂ ನನಗೆ ಹಣ ಸಹಾಯಮಾಡಲೊಪ್ಪಿಕೊಂಡ. ನಮ್ಮ ತಂದೆಯು ಸಂಗೀತವನ್ನೇ ದ್ವೇಷಿಸುತ್ತಿದ್ದುದರಿಂದ ಅವರನ್ನು ಕೇಳುವ ಹಾಗಿರಲಿಲ್ಲ. ನಮ್ಮಣ್ಣನು ಹಣ-ಕಾಸು-ಮನೆಯ ಆಡಳಿತ ವೆಲ್ಲವನ್ನೂ ನೋಡುತ್ತಿದ್ದುದರಿಂದ ನನಗವನ ಸಹಾಯ ಮಾತ್ರ