ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಿರುಕಾದಂಬರಿಗಳು / ಗಂಡಸರು ೩೩೫
ಬೇರೆಯಾಗಿದೆ, ಭಯಂಕರವಾಗಿದ್ದೆ....
ಆಕೆ ಪತ್ರವನ್ನು ಇನ್ನೊಮ್ಮೆ ಓದಿದಳು. ಮತ್ತೊಮ್ಮೆ. ಮೂರನೆಯ ಸಲ ಓದುವುದರಲ್ಲಿ ಆವಳಿಗೆ ಆದು ಬಾಯಿಪಾಠವಾಗಿ ಹೋಯಿತು. ಆ ರಾತ್ರಿ ಮಲಗುವ ಮುನ್ನ ಆಕೆ ತನಗೆ ತಾನೇ ಹಲವು ಬಾರಿ ಹೇಳಿಕೋಂಡಳು,
'I love you Shanthi',ಎಷ್ಟು ಚೆಂದದ ವಾಕ್ಯ !
* * * 'ಗಂಡು ಹುಡುಗರಿಗೆ ಸಣ್ಣ ವಯಸ್ಸಿನಲ್ಲಿ ಬುದ್ದಿಯಿರುವುದ್ದಿಲ್ಲ.ಹೀಗೇ ಮಂಗನಾಟ ಆಡುತ್ತಾರೆ. ನಂತರ ಆಟದಂತೆಯೇ ಎಲ್ಲವನ್ನು ಲೈಟಾಗಿ ತೆಗೆದುಕೊಂಡು ಲೈಟಾಗಿಯೇ ಮುಗಿಸಿಬಿಡುತ್ತಾರೆ. ಅವರಿಗೆ ಸೀರಿಯಸ್ನೆಸ್ ಇರುವುದಿಲ್ಲ. ಸಿನ್ಸಿಯಾರಿಟಿ ಇರುವುದಿಲ್ಲ. ಆದ್ದರಿಂದ ಅವರ ಇಂಥ ಆಟಗಳಿಗೆ ಹುಡುಗಿಯರಿಗೆ ಸೊಪ್ಪು ಹಾಕಬಾರದು.ಹಾಕಿದರೆ ಕೊನೆಗೆ ಕೆಟ್ಟ ಹೆಸರು ಬರುವುದು ಹುಡುಗಿಯರಿಗೇ. ನಮ್ಮ ಸಮಾಜವೇ ಹೀಗೆ. ಗಂಡಸರು ಏನೂ ಮಾಡಿದರೂ ತಪ್ಪಲ್ಲ. ಹೆಂಗಸರೇ ಎಲ್ಲ ರೂಲ್ಸು, ಕಟ್ಟು,ಮಣ್ಣು.
ಆ ರಾತ್ರಿ ಶಾಂತಿ ಡೈರಿಯಲ್ಲಿ ಬರೆದಳು.ಮರುದಿನ ಮು೦ಜಾನೆ ಎದ್ದು ಡೈರಿಯಲ್ಲಿ ಬರೆದುದನ್ನು ಒದಿದಾಗ ಅವಳಿಗೆ ಸಮಧಾನವಾಯಿತು.ಮಧ್ಯಾಹ್ನ ಶಾಲೆಗೆ ಹೋಗುವ ಮುನ್ನ ಮತ್ತೊಮ್ಮೆ ಅದನ್ನೇ ಓದಿ ಅವಸರದಲ್ಲಿ ಕೆಳಗೆ ಇನ್ನೆರಡು ಸಾಲು ಸೇರಿಸಿದಳು.
'ನಮ್ಮ ಹಿ೦ದೂ ಹೆ೦ಗಸರು ಈ ಅನ್ಯಾಯ ಅತ್ಯಾಚಾರಗಳನ್ನು ಇನ್ನು ಸಹಿಸಬಾರದು, ಅವರಿನ್ನು ಈ ಕಟ್ಟುಪಾಡುಗಳ ವಿರುದ್ಧ ಬ೦ಡೇಳಬೇಕು. ಸ೦ಪೂರ್ಣ ಸ್ವಾತ೦ತ್ರ್ಯ ಸಿಗುವವರೆಗೂ ಹೋರಾಟ ನಿಲ್ಲಿಸಬಾರದು'. ***
ಮು೦ದಿನ ಎ೦ಟುದ ದಿನಗಳಲ್ಲಿ ಶ೦ಕರನಿ೦ದ ಅದೇ ಧಾಟಿಯ ಮತ್ತೆರಡು ಪತ್ರ ಬ೦ದಾಗ ಮಾತ್ರ ಶಾ೦ತಿಗೆ ನಿಜವಾಗಿ ಚಿ೦ತೆಯಾಯಿತು. ಮನೆಯಲ್ಲಿ ಅಕಸ್ಮಾತ್ ಅಣ್ಣಾನಾಗಲೀ,ಅಪ್ಪನಾಗಲೀ ಇ೦ಥ ಪತ್ರ ನೋಡಿದರೆ? ಹೀಗೆಲ್ಲ ಬರೆಯಬೇಡವೆ೦ದು ಶ೦ಕರನಿಗೆ ತಿಳಿಸುವುದು ಹೇಗೆ ? ತನ್ನ ಕೈಬರಹ ಅವನಿಗೆ ಸಿಕ್ಕಿಬಿಟ್ಟು ಅವನೇನಾದರೂ ಅದರ ದುರುಪಯೊಗ ಪದೆಯಲೆತ್ನಿಸಿದರೆ? ಹುಡುಗಿಯಾದವಳಿಗೆ ಮರ್ಯಾದೆಗಿ೦ತ ಹೆಚ್ಚಿನದು ಏನಿದೆ ? ಒಮ್ಮೆ ಹೋದ ಮಾನ, ಕೆಟ್ಟ ಹೆಸರು, ಏನಾದರೂ ರಿಪೇರಿಯಾಗುವುದಿಲ್ಲ - ಅ೦ತ ಅಮ್ಮ ಹೇಳುಯಯತ್ತಾಳಲ್ಲ. ತನ್ನ ಮಾನ ಹೋಗಲು,