ಜೋತೆಯಾಗುತ್ತಿದ್ದಾತ ಮುಂದೊಂದು ದಿನ 'ಐ ಲವ್ಹ್ ಯೂ' ಹಾಡಿದ್ದ ಅವಳೆದುರಿಗೆ.
ಅಂಥದರಲ್ಲೆಲ್ಲಾ ತನಗೆ ನಂಬಿಕೆಯಿಲ್ಲವೆಂದು ಶಶಿ ಧಿಕ್ಕರಿಸಿದಾಗ ಆರೇಳು ತಿಂಗಳ
ಕಾಲ ಗಡ್ಡ ಬೆಳೆಸಿ ಎಲ್ಲರ ಕಂಪನಿ ತೊರೆದು ಬರೇ ಸಿಗರೇಟು ಸೇದುತ್ತ ನಿರಾಶ
ಪ್ರೇಮಿಯ ಹಾಗೆ ಅಲೆದಾಡಿದ. ಯಾತಕ್ಕೂ ಆಕೆ ಜಗ್ಗದಿದ್ದಾಗ ಮತ್ತೆ ನಾರ್ಮಲ್
ಆಗಿ ಒಳ್ಳೆಯ ಹುಡುಗನ ಹಾಗೆ ಓದಿ ಪಾಸಾಗಿ ಮುಂದೆ ಎಮ್.ಎಸ್. ನೂ ಮಾಡಿ
ಕೆಲಸಕ್ಕೆ ಸೇರಿದ್ದ.ಆತನ ಪ್ರೇಮವನ್ನು, ಆತನೊಂದಿಗೆ ಮದುವೆಯನ್ನು ನಿರಾಕರಿಸಿದ್ದ
ಶಶಿ ಒಂದೇ ಹಾಸ್ಟಿಟಲಿನಲ್ಲ ಕೆಲಸ ಮಾಡುತ್ತಿದ್ದ ಆತನ ಗೆಳೆತನವನ್ನು,
ಸಹವಾಸವನ್ನು ನಿರಾಕರಿಸಲಿಲ್ಲ. ಸತೀಶ ಅಷ್ಟರಿಂದಲೇ ತೃಪ್ತಿಪಟ್ಟ ಹಾಗೆ
ತೋರುತ್ತಿದ್ದರೂ ಆಗೀಗ ಮತ್ತೆ ಮತ್ತೆ ಮದುವೆಯ ಬೇಡಿಕೆಯನ್ನು ಮುಂದಿರಿಸಿ
ಅವಳ ಮನಃಪರಿವರ್ತನೆಗೆ ಪ್ರಯತ್ನಿಸುವುದನ್ನು ಇನ್ನೂ ಬಿಟಿರಲಿಲ್ಲ.
ಮದ್ಯಾಹ್ನ ಊಟದ ಬಿಡುವಿನ ತುಸು ಮುಂಚೆ ಶಶಿಯನ್ನು ಕಾಣಲು
ಮಾಲಿನಿಬಾಯಿ ಪಟೇಲ ಬಂದಳು. ಶಶಿ ಇರುವ ಬಿಲ್ಡಿಂಗಿನಲ್ಲೇ ಮೇಲಿನ ಪ್ಲೋರಿನಲ್ಲಿ
ಆಕೆಯ ಮನೆ. ಪಶ್ಚಿಮ ಮುಳುಂದದಿಂದ ಕಳೆದ ಹತ್ತಾರು ವರ್ಷಗಳಿಂದಲೂ
ಮ್ಯುನಿಸಿಪಲ್ ಕಾರ್ಪೊರೇಶನ್ ಮೆಂಬರ್ ಆಗಿ ಆರಿಸಿ ಬರುತ್ತಿದ್ದ, ಅಸೆಂಬ್ಲಿಯ
ಚುನಾವಣೆಗೆ, ಸ್ಪರ್ಧಿಸಲು ತಯಾರಿ ನಡೆಸಿದ್ದ, ಖಂಡಿತ ಆರಿಸಿ ಬರುವೆನೆಂದು
ಆತ್ಮವಿಶ್ವಾಸವಿದ್ದ, ಪ್ರಭಾವೀ ಹೆಂಗಸು ಆಕೆ - ಸದಾಕಾಲ ಆ - ಈ ಮೀಟಿಂಗು - ಸಭೆ
ಅಂತ ಓಡಾಡುತ್ತಲೇ ಇದ್ದಳು. ಆಕೆಯ ಗಂಡ ಪಾಪ, ಕೆಲವರ್ಷಗಳ ಹಿಂದೆ ಕಾರು
ಅಪಘಾತದಲ್ಲಿ ಎರಡೂಕಾಲು ಕಳೆದುಕೊಂಡವನಿಗೆ ಮೊನ್ನೆಮೊನ್ನೆ ಹಾರ್ಟ್
ಅಟ್ಯಾಕ್ ಆಗಿತ್ತು. ತುಂಬ ಬಿಝಿಯಾಗಿರುವ ಮಾಲಿನಿಬಾಯಿ ಮನೆಯಲ್ಲಿ ಗಂಡನಿಗೆ
ಸರಿಸಿಯಾದ ಆರೈಕೆ ಮಾಡಲಾಗುವುದಿಲ್ಲವೆಂದು, ಶಶಿ ಕೆಲಸ ಮಾಡುವ ಹಾಸ್ಟಿಟಲಿಗೆ
ಆತನನ್ನು ಸೇರಿಸಿದ್ದಳು, ಹೇಗೂ ಶಶಿ ಇರುತ್ತಾಳಲ್ಲ. ಕಾಳಜಿ ತಗೊಳ್ಳುತ್ತಾಳೆ ಅಂತ.
ಇವತ್ತು ಆತನನ್ನು ಡಿಸ್ ಚಾರ್ಜ್ ಮಾಡುವವರಿದ್ದರೆಂದು ಈಕೆ ಬಂದಳೆಂದು
ಕಾಣುತ್ತದೆ.
"ಬರ್ರಿ ಬರ್ರಿ ಮಿಸೆಸ್ ಪಟೇಲ, ನಿಮ್ಮ ಹಜ್ ಬಂಡ್ ಈಗ ಆರಾಮಿದ್ದಾರ.
ರೆಸ್ಟ್ ತಗೊಂಡ್ರ ಸಾಕು. ಎಲ್ಲಾ ಮೆಡಿಸಿನ್ಸ್ ನೇಮದಿಂದ ಕೊಡ್ರಿ ಆತು.ನಾನೂ
ಬಂದು ದಿನಾ ಚೆಕ್ ಅಪ್ ಮಾಡ್ತಿರ್ತೀನಿ. ನೀವೇನೂ ಕಾಳಜಿ ಮಾಡೋ ಕಾರಣಿಲ್ಲ."
ಮಾಲಿನಿಬಾಯಿ ಗಂಡನ ಸಲುವಾಗಿ ಕಾಳಜಿ ಮಾಡುವ ಜಾತಿಯ ಹೆಂಗಸೇ
ಅಲ್ಲ. ಆಕೆಯ ಕಾಳಜಿಯ ವಿಷಯ ಬೇರೆಯೇ ಆಗಿತ್ತು: "ನಿಮಗೂ ಗೊತ್ತಿರಬೇಕಲ್ಲ
ಡಾಕ್ಟರ್ ಬಾಯಿ, ಈ ಸರೆ ಅಸೆಂಬ್ಲಿ ಇಲೆಕ್ಸನ್ನಿಗೆ ಕಾಂಟೆಸ್ಟ್ ಮಾಡಬೇಕಂತೀನಿ. ಆರಿಸಿ
ಪುಟ:ನಡೆದದ್ದೇ ದಾರಿ.pdf/೪೧೧
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೪೦೪
ನಡೆದದ್ದೇ ದಾರಿ