ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೭೨
ಅಂದು ರಾತ್ರಿ ಹನ್ನೆರಡು ಗಂಟೆ. ಹುಣ್ಣಿಮೆಯಾದರೂ ಯಾಕೋ ಒಮ್ಮೆಲೇ ಮಳೆ ಹನಿಯತೊಡಗಿದ್ದರಿಂದ ಅಮಾವಾಸ್ಯೆಯ ಹಾಗೆ ದಟ್ಟ ಕತ್ತಲು ಕವಿದಿತ್ತು. ಸುತ್ತಲಿನ ನಾಲ್ಕು ಮಾರುಗಳಾಚೆ ಏನೂ ಕಾಣೀಸದಷ್ಟು ಕತ್ತಲು. ಇಡಿಯ ಹಳ್ಳಿ-ಗುಡಿಯಲ್ಲಿನ ಹನುಮಂತ ಸಹ -ನಿದ್ರಿಸಿದಂತೆ ಕಾಣುತ್ತಿತ್ತು.
ಊರಾಚೆಯ ಕೆರೆಯ ದಂಡೆಯ ಮೇಲಿನ ಮಾವಿನ ತೋಪಿನಲ್ಲಿ ಈಶಾನ್ಯದ ಮೂಲೆಯ ಕಡೆ ದಾಪುಗಾಲು ಹಾಕುತ್ತ ನಡೆದಿದ್ದ ಕೇಶವಾಚಾರಿ. ನಡೆಯುತ್ತ ನಡೆಯುತ್ತ , ನಿಂತು ನಿಂತು ನೋಡುತ್ತ , ಮತ್ತೆ ಮುಂದೆ ನಡೆದಂತೆ ಆತನಿಗೇಕೋ ಇಂದು ತಾನು ದಾರಿ ತಪ್ಪಿದೆನೇ ಅನಿಸತೊಡಗಿತು. ತಾನು ಎಲ್ಲಿದ್ದೇನೆಂದು ಖಚಿತಪಡಿಸಿಕೊಳ್ಳಲು ಆತ ಒಂದು ನಿಮಿಷ ನಿಂತಲ್ಲೇ ನಿಂತು ಸುತ್ತು ನೋಡಿದ. ಹೆಜ್ಜೆಯ ಸಪ್ಪಳು. ಅದರೊಂದಿಗೇ ತುಂಬಿದ ತೋಳುಗಳೆರಡು ಹಿಂದಿನಿಂದ ಆತನನ್ನು ಬಳಸಿದವು : 'ಇದೇನು ಆಚಾರೆಪ್ನೋರು ಇಂದ ದಾರೀನș ತೆಪ್ಪೀರಿ ? ದಿನದ ಜಾಗೇದಗ ಕುಂತ ಕುಂತ ಸಾಕಾಗಿ ಹುಡಿಕ್ಯಾಡಿಕೊಂತ ಬಂದೆ ನಾ. ಇಲ್ಲೆ ಬ್ಯಾಡ ನಡೀರಿ, ನಮ್ಮ ಜಾಗೆಕ್ಕ ಹೋಗೂಣು. ಏನ ಮರೆವş ನಂ ದೇವ್ರಿಗೆ-' ಮಾತು ಮುಗಿಸಲು ಕೊಡದೆ ಹೊಲತಿ ಕಾಳಿಯನ್ನು ಬಿಗಿದಪ್ಪಿ ನೆಲದ ಮೇಲುರುಳಿದ ಕೇಶವಾಚಾರಿಗೆ ನಿಜವಾಗಿ ಎಲ್ಲ ಮರೆವಾಯಿತು.
ಒಮ್ಮೆಲೆ ಬೆಳದಿಂಗಳು ಮೂಡಿ ಬೆಳಕಾದುದರಿಂದ ಸಾವರಿಸಿಕೊಂಡು ಎದ್ದಳು ಕಾಳಿ- ' ನಾ ಹೇಳ್ನಿಲ್ಲș ಈ ಆರೀದ ಜಾಗೇ ಬ್ಯಾಡ ಅಂತ ? ಏನș ಸಪ್ಪಳಾಕ್ಕೇತಿ ಆ ಕಂಟ್ಯಾಗ'-ಎನ್ನುತ್ತ . ಹಾವಿ-ಗೀವು ಇದ್ದೀತೆಂದು ಅತ್ತ ತಿರುಗಿ ನೋಡಿದ ಕೇಶವಾಚಾರಿ ಆಕೆ ತೋರಿದ ದಿಕ್ಕಿನತ್ತ-ನೋಡುತ್ತಲೇ ಇದ್ದು ಬಿಟ್ಟ : ಕಂಟಿಯೊಳಗಿನಿಂದ ಝಾಡಿಸಿಕೊಂಡು ಎದ್ದ ಮನುಷ್ಯಾಕೃತಿಗಳೆರಡು ಕೈಯಲ್ಲಿ ಕೈ ಸೇರಿಸಿ ಊರ ಕಡೆ ಮುಖಮಾಡಿ ಹೊರಟಿದ್ದವು. ಒಂದು ಗಂಡು ಮತ್ತು ಒಂದು ಹೆಣ್ಣು . ಹೌದು,ವೀರಭದ್ರಗೌಡ ಮತ್ತು -ಮತ್ತು ವೇದವಿದ್ಯಾ ಪಾರಂಗತ ಶ್ರೀನಿವಾಸಾಚಾಯ೯ರ ನಾಚುಬುರುಕ ಮುಗ್ಧ ಮಗಳು, ವಿಧವೆ ಸುಶೀಲಾ.