ಸಂಜೆಯ ಮಂಜಿನ ಕಪ್ಪು- ಅಂಜಿದಡೆ ಶಂಕೆ ತದ್ರೂಪವಾಗಿ ನಿಂದಿತ್ತು. ತನ್ನ ಭಾವದ ನಟನೆ ನಡೆವನ್ನಕ್ಕ ನಡೆಯಿತ್ತು ಅದು ನಿಂದಲ್ಲಿಯೇ ನಿಂದಿತ್ತು. ಅದರಂತುವನರಿದಡೆ ಹಿಂದೆ ಹುಸಿ ಮುಂದೆ ಕೂಡಲಸಂಗಮದೇವನ ನಿಲವು ತಾನೆ !