ಪುಟ:ನಳ ಚರಿತೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ' ಳ ಚ' ರಿ ತ). ( ಭಾಮಿನೀ ಷಟ್ಟದಿ. ) - ತಿರಮಣ ಸರಸಿಜದಳಾಕ್ಷ ಮು | ರಾರಿ ಸಚರಾಚರಭರಿತ ದುರಿ | ತಾರಿ ನಿತ್ಯಾನಂದ ನಿರ್ಜರನಿಕರದಾತಾರ || ವಾರಿಜಾಂಬಕ ವರಗುಣತ್ರಯ | ಮಾರಪಿತ ವೇದಾಂತನುತ ವರ | ಸೌರಚೆನ್ನಿಗರಾಯ ಪಾಲಿಸು ನಮಗೆ ಸತ್ಯಪರು || ಶರಧಿಶಯನ ಮುಕುಂದ ಕಂಕಣ | ಸುರಮಠನ ಸುರಮೌಳಿವಂದಿತ | ಗಿರಿಧರಾಚ್ಯುತ ವೇಣುನಾದವಿನೋದ ಭವದೂರ |- ಸರಸಿಜೋದ್ದವನುತ ಗಯಾನಾ | ಗರ ಮುರಾಂತಕ ದೇವ ವರಪುರ | ದರಸ ಚೆನ್ನಿಗರಾಯ ಪಾಲಿಸು ಸಕಲಸಜ್ಜನರ ! ಉರಗರಿಪುಕೇತನ ವಿಛ•ಪ್ರಣ | ವರವ ಹರಿ ಸಬ್ಬಕಪೋಷಣ | ದುರಿತಕುಲಗಿರಿವಜ) ನರಕಾಂತಕ ಮಹಾಮಹಿಮ | ಪರಮಪುರುಷ ಯಶೋದೆಯಾತ್ಮಜ | ದುರಿತದುಃಖವಿನಾಶ ವರಪುರ | ದರಸ ಚೆನ್ನಿಗರಾಯ ರಕ್ಷಿಸು ನಮ್ಮನನವರತ !! ಕರಿವದನ ಹೆರಂಬ ಲಿಂಬೊ | ದರ ಚತುರುಜ ಮೋದಕಪ್ರಿಯ | ಪರಶುಭಾಶಾಂಕುಶಕರಾಂಕಿತದಿಂದ ರಂಜಿಸುವ || ಸುರನರೋರಗನಮಿತ ಗೌರೀ ! ವರಕುಮಾರಕ ವಿದ್ಯೆವಾರಿಧಿ | ವರದಗಣಪತಿ ಪಾಲಿಸೆನ್ನಯ ಮತಿಗೆ ಮಂಗಳವ |