ವಿಷಯಕ್ಕೆ ಹೋಗು

ಅಯ್ಯ ! ಕಾರ್ಯನಲ್ಲ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಯ್ಯ
!
ಕಾರ್ಯನಲ್ಲ
ಕಾರಣನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಭೇದಕನಲ್ಲ
ಸಾಧಕನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಪಾತಕನಲ್ಲ
ಸೂತಕನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ದ್ವೈತನಲ್ಲ
ಅದ್ವೈತನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಕಾಟಕನಲ್ಲ
ಕೀಟಕನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಎನ್ನವನಲ್ಲ
ನಿನ್ನವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಸಂಕಲ್ಪನಲ್ಲ
ವಿಕಲ್ಪನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಒಮ್ಮೆ
ಆಚಾರದವನಲ್ಲ
ಒಮ್ಮೆ
ಅನಾಚಾರದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಕುಂಟಣಿಯಲ್ಲ
ನೆಂಟಣಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ದುಶ್ಶೀಲನಲ್ಲ
ದುರ್ಮಾರ್ಗಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಜಾತಿಯವನಲ್ಲ
ಅಜಾತಿಯವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಇಂದು
ಉಭಯವಳಿದು
ಬೆಳಗುವ
ಸಂಗನಬಸವಣ್ಣನ
ಉನ್ಮನಾಗ್ರದಲಿ
ಹೊಳೆವಾತ
ತಾನೆ
ನೋಡ
!
ಗುಹೇಶ್ವರಲಿಂಗವು
ಚೆನ್ನಬಸವಣ್ಣ.