ಬೆರಸುವಡೆ ಬೇಗ ತೋರಾ ಹೊರ ಹಾಯ್ಕದಿರಯ್ಯಾ. ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು ; ಎನ್ನ ಹೊರ ಹಾಯ್ಕದಿರಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ನಂಬಿ ಬೆಂಬಳಿಬಂದೆನು ಇಂಬುಗೊಳ್ಳಯ್ಯಾ ಬೇಗದಲಿ.