ಕೇಳಿ ಭೋ !

ವಿಕಿಸೋರ್ಸ್ದಿಂದ


Pages   (key to Page Status)   

ಕೇಳಿ ಭೋ ! ಕೇಳಿ ಭೋ ! ವಿಪ್ರರೆಲ್ಲರೂ ಬ್ರಹ್ಮಾಂಡಪುರಾಣದಲ್ಲಿ ನಿಮ್ಮ ಬ್ರಹ್ಮ ನುಡಿದ ವಾಕ್ಯವು; ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞಾನವೇದಿನಾಂ ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಬಭೂ ಎಂದುದಾಗಿ ನಂಬಿ ಧರಿಸಿ ಭೋ ! ವಿಪ್ರರೆಲ್ಲರೂ ಶ್ರೀಮಹಾಭಸಿತವ. ಇದ ನಂಬಿಯೂ ನಂಬದೆ ಅಜ್ಞಾನದಿಂದ ಶ್ರೀಮಹಾಭಸಿತವ ಬಿಟ್ಟು
ಮಣ್ಣು ಮಸಿ ಮರದ ರಸಂಗಳ ಮೋಹದಿಂದ ನಿಮ್ಮ ಹಣೆಯಲ್ಲಿ ಬರೆದುಕೊಂಡಿರಾದಡೆ ನಮ್ಮ ಕೂಡಲಸಂಗಮದೇವರಲ್ಲಿ
ನಿಮ್ಮ ಅಧಿದೈವವೇ ನಿಮ್ಮ ಕಿವಿ ಮೂಗ ಕೊಯಿದು
ಇಟ್ಟಿಗೆಯಲೊರಸಿ
ಕನ್ನಡಿಯ ತೋರಿ
ನಡೆಸಿ ನರಕದಲ್ಲಿ ಕೆಡುಹದೆ ಬಿಡ ಕಾಣಿ ಭೋ ! ಇದನರಿದು ಮರೆಯದೆ ಧರಿಸಿ ಭೋ ! ಕೆಡಬೇಡ
ಕೆಡಬೇಡ
ಮಹತ್ತಪ್ಪ ಶ್ರೇಮಹಾಭಸಿತವ ಧರಿಸಿ ಮುಕ್ತರಾಗಿರೇ.



"https://kn.wikisource.org/w/index.php?title=ಕೇಳಿ_ಭೋ_!&oldid=80928" ಇಂದ ಪಡೆಯಲ್ಪಟ್ಟಿದೆ