ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಶಗಣ

ವಿಕಿಸೋರ್ಸ್ದಿಂದ

ಅಂಶಗಣ : -

 ಅಕ್ಷರ ಮತ್ತು ಮಾತ್ರೆಗಳಂತೆ ಒಂದು ಗುರುವಿನ ಉಚ್ಚಾರಣೆಯ ಅಂಶವನ್ನು ಆಧಾರವಾಗಿಟ್ಟುಕೊಂಡು ಮಾಡುವ ಗಣರಚನೆಗೆ ಈ ಹೆಸರಿದೆ. ಈ ಗಣದಲ್ಲಿನ ಮೊದಲ ಅಂಶ ಒಂದು ಗುರು ಅಥವಾ ಎರಡು ಲಘುಗಳಾಗಿದ್ದು ಅನಂತರದ ಅಂಶ ಒಂದು ಲಘುವೋ ಒಂದು ಗುರುವೋ ಆಗಿರುತ್ತದೆ.

 ಸಂಸ್ಕøತದ ವೈದಿಕ ಛಂದಸ್ಸಿನಲ್ಲಿ ಅಕ್ಷರ ವೃತ್ತಗಳೂ ಲೌಕಿಕ ಛಂದಸ್ಸಿನಲ್ಲಿ ವರ್ಣವೃತ್ತಗಳೂ ಪ್ರಾಕೃತ-ಅಪಭ್ರಂಶಗಳಲ್ಲಿ ತಾಳವೃತ್ತ-ಮಾತ್ರಾವೃತ್ತಗಳೂ ವಿಶಿಷ್ಟವಾಗಿರುವಂತೆಯೇ ದ್ರಾವಿಡ ಭಾಷೆಗಳಲ್ಲಿ ದೇಶೀಯವಾದ ಹಾಡಿನ ಮಟ್ಟುಗಳು ಜಾತಿ ಎಂದೆನಿಸಿ ವಿಶಿಷ್ಟವಾಗಿವೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಆದಿಕಾಲದಿಂದ ಸಹಜವಾಗಿ ಬಂದಿರುವ ಹಾಡಿನ ಮಟ್ಟುಗಳ ಗುಂಪನ್ನು ಛಂದಶ್ಯಾಸ್ತ್ರ ಕರ್ತೃಗಳು ಕರ್ಣಾಟ(ಕ) ವಿಷಯೆ ಜಾತಿ (ವೃತ್ತ) ಎಂದೂ ಕರ್ಣಾಟ ವಿಷಯ ಭಾಷಾಜಾತಿ ಎಂದೂ ಕರೆದಿದ್ದಾರೆ. ಅದನ್ನು ಕುರಿತಾದ ಜಾತಿಛಂದಸ್ಸು ದೇಶ್ಯ ಛಂದಸ್ಸು ಕನ್ನಡಛಂದಸ್ಸು ಅಚ್ಚಕನ್ನಡಛಂದಸ್ಸು ಎಂದು ಮುಂತಾಗಿ ಹೇಳುತ್ತಿದ್ದುದು ರೂಢಿ. ಈಚೆಗೆ ಇವುಗಳೊಂದಿಗೆ ಅಂಶಛಂದಸ್ಸು ಎಂಬ ಒಂದು ಮಾತು ಕೂಡಿಕೊಂಡಿತು; ಅವರೊಂದಿಗೆ ಅಂಶಲಯ ಅಂಶಗಣ ಎಂಬಂಥ ಮಾತುಗಳೂ ಸೇರಿದುವು.

 ನಾಗವರ್ಮ ಜಯಕೀರ್ತಿ ಮೊದಲಾದವರು, ಕನ್ನಡ ಸಂಸ್ಕøತ ಲಾಕ್ಷಣಿಕರು, ಕೆಲವು ಬಗೆಯ ಜಾತಿಛಂದಸ್ಸಿನ ಮಟ್ಟುಗಳನ್ನು ಅವುಗಳ ಪ್ರಭೇದಗಳೊಡನೆ ತಮ್ಮ ಗ್ರಂಥಗಳಲ್ಲಿ ವಿವರಿಸಿದ್ದಾರೆ. ನಾಗವರ್ಮ ಛಂದೋಂಬುಧಿಯಲ್ಲಿ (ಕ್ರಿ.ಶ.ಸು.990) ಇಂಥ ಮಟ್ಟುಗಳ ಲಕ್ಷಣಗಳನ್ನು ನಿರೂಪಿಸುವಾಗ, ಅವುಗಳಲ್ಲಿ ತೋರುವ ವಿಶಿಷ್ಟರೀತಿಯ ಗಣಗಳನ್ನು ಬ್ರಹ್ಮ ವಿಷ್ಣು ರುದ್ರ ಎಂಬ ಸಂಜ್ಞೆಗಳಿಂದ ನಿರ್ದೇಶಿಸಿ ಅವುಗಳ ಸ್ವರೂಪವನ್ನೂ ತಕ್ಕಮಟ್ಟಿಗೆ ವಿಶದಪಡಿಸಿದ್ದಾನೆ. ಇವೇ ಗಣಗಳಿಗೆ ಜಯಕೀರ್ತಿ ಮೊದಲಾದ ಸಂಸ್ಕøತ ಛಂದಶ್ಯಾಸ್ತ್ರಕಾರರು ರತಿ ಮಾದನ ಶರ ಎಂಬ ಸಂಜ್ಞೆಗಳನ್ನು ಕೊಟ್ಟಿದ್ದಾರೆ; ಭೀಮಕವಿ ಮೊದಲಾದ ತೆಲುಗು ಲಾಕ್ಷಣಿಕರು ಸೂರ್ಯ ಇಂದ್ರ ಚಂದ್ರ ಎಂಬ ಸಂಜ್ಞೆಗಳನ್ನು ಬಳಸಿದ್ದಾರೆ. ತಮಿಳಿನಲ್ಲಿ ಇವನ್ನು ಹೋಲುವ ಹೆಸರುಗಳು ಈರಶೈಶೀರ್, ಮೂವಶೈಶೀರ್ ಮತ್ತು ನಾಲಶೈಶೀರ್.

 ಕನ್ನಡದ ಬ್ರಹ್ಮ ವಿಷ್ಣು ರುದ್ರ ಎಂಬ ಹೆಸರುಗಳನ್ನು ಗಮನಿಸಿ, ಕೆಲವರು ಅವನ್ನು ತ್ರಿಮೂರ್ತಿಗಣವೆಂದೂ ದೇವಗಣವೆಂದೂ ಕರೆಯುತ್ತಾರೆ. ಆದರೆ ಜಾತಿಛಂದಸ್ಸಿಗೆ ಮೂಲಮಾಪಕವಾದ ಅಕ್ಷರವನ್ನು ಅಂಶವೆಂದೂ ಅದರ ವಿಶಿಷ್ಟ ರೀತಿಯ ಗಣಗಳಿಗೆ ಅಂಶಗಣವೆಂದೂ ಮೊದಲು ಹೆಸರು ಕೊಟ್ಟವರು ಪ್ರಾ. ಬಿ. ಎಂ. ಶ್ರೀಕಂಠಯ್ಯನವರು, ಅವರು ಬ್ರಹ್ಮ ವಿಷ್ಣು ರುದ್ರಗಣಗಳ ಮೂಲ ಮಾಪಕವನ್ನು ಅಂಶವೆಂದು ಕರೆಯಲು ತಮಿಳು ಛಂದಸ್ಸಿನ ಆಶೈ ಎಂಬ ಪದದಿಂದ ಪ್ರೇರಣೆಯನ್ನು ಪಡೆದಿರಬಹುದು. ತಮಿಳಿನ ಆಶೈನಿಂದಾದ ಶೀರ್‍ಗೂ ಕನ್ನಡದ ಅಂಶದಿಂದಾದ ಅಂಶಗಣಕ್ಕೂ ಹೋಲಿಕೆಯಿದೆ.

 ಅಂಶ ಎಂದರೆ ಜಾತಿಛಂದಸ್ಸಿನ ಪದ್ಯಪಾದಗಳ ಗಣಗಣಗಳಲ್ಲಿ ತಾಳಲಯಗಳು ಸರಿಯಾಗಿ ಹೊಂದಿಕೊಳ್ಳಲು ಮಾತ್ರಪರಿಮಾಣ ಹಿಗ್ಗಿ ಅಥವಾ ಕುಗ್ಗಿ ಹೊಂದಿಕೆಗೆ ಅನುವಾಗುವ ಅಕ್ಷರ. ಇಂಥ ಅಂಶಗಳಿಂದ ಕಟ್ಟಿದ ಗಣ ಅಂಶಗಣ. ಈ ಗಣದ ಮೊದಲನೆಯ ಅಂಶ ಗುರುವಾಗಿರುತ್ತದೆ, ಅಥವಾ ಅದರ ಸ್ಥಾನದಲ್ಲಿ ಎರಡು ಲಘುಗಳು ಬಂದಿರುತ್ತವೆ. ಗಣದಲ್ಲಿ ಆ ಮುಂದಿನ ಪ್ರತಿಯೊಂದು ಅಂಶವೂ ಒಂದು ಲಘುವೋ ಗುರುವೋ ಆಗಿರುತ್ತದೆ. ಎಂದರೆ ಗಣದ ಮೂಲಾಂಶ ಒಂದು ಗುರು ಒಂದೊಂದೇ ಅಕ್ಷರದಿಂದ ಆಗಿರಬೇಕು. ಗಣದ ಮೊದಲಲ್ಲಿ ( -) ಎಂಬ ರೀತಿಯ ಅಕ್ಷರವಿನ್ಯಾಸ ಬರುವಂತಿಲ್ಲ. ಹೀಗೆ ಒಂದು ಗುರು ಅಥವಾ ಎರಡು ಲಘುಗಳನ್ನು ಮೂಲಮಾಪಕವಾಗಿಟ್ಟುಕೊಂಡು ಅಂಶಗಣಗಳನ್ನು ಗುರುತಿಸಬೇಕಾಗುತ್ತದೆ.. ಒಂದು ಗುರು ಅಥವಾ ಎರಡು ಲಘುಗಳಾದ ಮೇಲೆ ಗುರುವಾಗಲಿ ಲಘುವಾಗಲಿ ಒಂದು ಅಂಶ (ಅಕ್ಷರ) ಬಂದರೆ ಅದು ಬ್ರಹ್ಮ (ರತಿ, ಸೂರ್ಯ) ಗಣವಾಗುತ್ತದೆ. ಒಂದು ಗುರು ಅಥವಾ ಎರಡು ಲಘುಗಳಾದ ಮೇಲೆ ಗುರುವಾಗಲಿ ಲಘುವಾಗಲಿ ಮೂರು ಅಂಶಗಳು (ಅಕ್ಷರ) ಬಂದರೆ ಅದು ವಿಷ್ಣು (ಮದನ, ಇಂದ್ರ) ಗಣವಾಗುತ್ತದೆ. ಬ್ರಹ್ಮ (ರತಿ, ಸೂರ್ಯಗಣಕ್ಕೆ ಒಟ್ಟು ಎರಡು ಅಂಶಗಳು; ರುದ್ರ (ಶರ ಚಂದ್ರ) ಗಣಕ್ಕೆ ಒಟ್ಟು ನಾಲ್ಕು ಅಂಶಗಳು. ಪ್ರಸ್ತಾರವೈವಿಧ್ಯದಿಂದ 4 ವಿಧವಾಗಿ ಬ್ರಹ್ಮ (ರತಿ) ಗಣಗಳೂ (-.-;.;.;.), 8 ವಿಧವಾಗಿ ವಿಷ್ಣು (ಮದನ) ಗಣಗಳೂ (-.-.-;-.-.;.-.-;.-.;-..-;-..;..-;..) 16 ವಿಧವಾಗಿ ರುದ್ರ (ಶರ) ಗಣಗಳೂ (-.-.-.-;.-.-.-;-..-.-;..-.-;-.-..-;.-..-;-...-;..-;-.-.-.;.-.-.;-..-.;..-.;-.-...;.-..;-....;...) ಏರ್ಪಡುವ ಸಾಧ್ಯತೆಯಿದೆ. ಇದನ್ನು ಪರಿಶೀಲಿಸಿದರೆ ಒಂದು ಬ್ರಹ್ಮಗಣದಲ್ಲಿ ಮೂರರಿಂದ ನಾಲ್ಕು ಮಾತ್ರೆಗಳು, ಒಂದು ವಿಷ್ಣುಗಣದಲ್ಲಿ ನಾಲ್ಕರಿಂದ ಆರು ಮಾತ್ರೆಗಳು, ಒಂದು ರುದ್ರಗಣದಲ್ಲಿ ಐದರಿಂದ ಎಂಟು ಮಾತ್ರೆಗಳು ಅಡಕವಾಗುತ್ತವೆಯೆನ್ನಬಹುದು.

 ತೆಲುಗು ಅಂಶಗಣದಲ್ಲಿ, ಕನ್ನಡದ ಬ್ರಹ್ಮಗಣದ -.-. ಮತ್ತು . ಎಂಬ ವಿನ್ಯಾಸಗಳನ್ನು ಸೂರ್ಯಗಣದಲ್ಲಿಯೂ ಕನ್ನಡದ ವಿಷ್ಣುಗಣದ -.-.- ಮತ್ತು .. ಎಂಬ ವಿನ್ಯಾಸಗಳನ್ನು ಇಂದ್ರಗಣದಲ್ಲಿಯೂ ಕನ್ನಡದ ರುದ್ರಗಣದ -.-.-.- ಮತ್ತು ... ಎಂಬ ವಿನ್ಯಾಸಗಳನ್ನು ಚಂದ್ರಗಣದಲ್ಲಿಯೂ ತೆಲುಗು ಲಾಕ್ಷಣಿಕರು ಅಂಗೀಕರಿಸಿಲ್ಲವೆಂಬುದು ಕಾಣುತ್ತದೆ. ಆದರೆ ಪ್ರಾಚೀನವಾದ ತೆಲುಗು ಶಾಸನಗಳಲ್ಲಿ ಇಂಥ ಗಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.

 ತಮಿಳು ಅಂಶಗಣಗಳ ಸ್ವರೂಪ ಕನ್ನಡ ಮತ್ತು ತೆಲುಗು ಅಂಶಗಣಗಳ ಸ್ವರೂಪದಿಂದ ಸ್ವಲ್ಪಮಟ್ಟಿಗೆ ಬೇರೆಯಾಗಿದೆ. ಇಲ್ಲಿ ಗಣವಿನ್ಯಾಸದಲ್ಲಿ ಹೆಚ್ಚಿನ ಸ್ವಾತಂತ್ರ್ಯವೂ ವ್ಯಾಪ್ತಿಯೂ ವೈವಿಧ್ಯವೂ ಕಂಡುಬರುತ್ತವೆ. ನೇರ್ ಮತ್ತು ನಿರೈಗಳು ತಮಿಳು ಛಂದಸ್ಸಿನ ಆಶೈ (ಅಂಶ)ಗಳು. ಒಂದು ಹ್ರಸ್ವ ಅಥವಾ ದೀರ್ಘ ತಾನೇ ಆಗಲಿ, ಅಥವಾ ವ್ಯಂಜನ ಸೇರಿಯಾಗಲಿ ಬರುವುದು ನೇರ್; ಎರಡು ಹ್ರಸ್ವ ಅಥವಾ ಹ್ರಸ್ವ ದೀರ್ಘ ತಾನೇ ಆಗಲಿ, ಅಥವಾ ವ್ಯಂಜನ ಸೇರಿಯಾಗಿಲಿ ಬರುವುದು ನಿರೈ. ಈ ನೇರ್ ಆಶೈ ಮತ್ತು ನಿರೈ ಆಶೈಗಳು ಎರಡು ಸೇರಿದರೆ ಈರಶೈಶೀರ್, ಮೂರು ಸೇರಿದರೆ ಮೂವಶೈಶೀರ್, ನಾಲ್ಕು ಸೇರಿದರೆ ನಾಲಶೈಶೀರ್ ಆಗುವುವು. ಈ ಗಣಗಳು ಹ್ರಸ್ವದೀರ್ಘಗಳಿಂದಾಗಿವೆಯೇ ಹೊರತು ಲಘುಗುರುಗಳಿಂದಾಗಿಲ್ಲ. ಲಘು ಗುರುವಾಗುವ ಕೆಲವು ನಿಯಮಗಳು ಇಲ್ಲಿಗೆ ಅನ್ವಯಿಸುವುದಿಲ್ಲ. ಗಣದ ಮೊದಲಲ್ಲಿಯೇ ಅಲ್ಲದೆ ಆಮೇಲಿನ ಅಂಶಗಳ ಸ್ಥಾನದಲ್ಲಿಯೂ ಒಂದು ದೀರ್ಘ ಅಥವಾ ಹ್ರಸ್ವಕ್ಕೆ ಬದಲಾಗಿ ಎರಡು ಹ್ರಸ್ವ ಅಥವಾ ಹ್ರಸ್ವದೀರ್ಘ ತಾನೇ ಆಗಲಿ. ವ್ಯಂಜನ ಸೇರಿಯಾಗಲಿ ಬರಬಹುದಾಗಿದೆ. ಇದು ನಾಗವರ್ಮಾದಿಗಳು ವಿವರಿಸಿರುವ ಅಂಶಗಣಗಳ ರಚನೆಗಿಂತ ಒಂದು ವಿಧದಲ್ಲಿ ಬೇರೆಯಾಗಿದೆ. ತಮಿಳಿನಲ್ಲಿ ಶುದ್ದವಾದ ದೇಶ್ಯರೀತಿಯಿಂದಲೂ ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ ಮಾತ್ರಾಪರಿಭಾಷೆಯ ಪ್ರಸ್ತಾರವಿಧಾನದಿಂದಲೂ ಅಂಶಗಣದ ಸ್ವರೂಪವನ್ನು ವಿವರಿಸಿರುವುದೇ ಇದಕ್ಕೆ ಕಾರಣ. ಅದುದರಿಂದ ತಮಿಳು ದೇಶ್ಯಛಂದಸ್ಸಿನ ಆಶೈ ಮತ್ತು ತಳೈಗಳ (ಗಣಸಂಧಿ) ನಿಯಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕನ್ನಡ (ತೆಲುಗುಗಳ) ಅಂಶಗಣದ ನಿಯಮಗಳನ್ನು ಕೆಲಮಟ್ಟಿಗೆ ಪರಿಷ್ಕರಿಸುವುದು ಸೂಕ್ತವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಇದರಿಂದ ಅಂಶಗಣಗಳ ವ್ಯಾಪ್ತಿ ವಿಸ್ತರಿಸಿ ಪ್ರಸ್ತಾರದ ತೊಡಕುಗಳು ಬಗೆಹರಿಯುವುದು ಸಾಧ್ಯವೆಂದು ಅವರು ಭಾವಿಸುತ್ತಾರೆ.

 ವರ್ಣಗಣ ಮಾತ್ರಾಗಣಗಳಿಂದ ಅಂಶಗಣದ ಪ್ರತ್ಯೇಕತೆಗೆ ಕಾರಣಗಳು ಹೀಗಿವೆ. ವರ್ಣವೃತ್ತಗಳು ವರ್ಣಮಾತ್ರೆಗಳಿಂದ ಕಟ್ಟಿದ ಪಾದಗಳನ್ನುಳ್ಳವು. ಇಂಥ ಪ್ರತಿಪಾದದಲ್ಲಿಯೂ ವರ್ಣಸಂಖ್ಯೆ ಇಷ್ಟೇ ಇರತಕ್ಕದ್ದು, ಲಘುಗುರುಗಳ ವಿನ್ಯಾಸ ಹೀಗೆಯೇ ಇರತಕ್ಕದ್ದು ಎಂಬುದಾಗಿ ಮೊದಲೇ ಗೊತ್ತಾಗಿರುತ್ತದೆ. ಲೌಕಿಕಛಂದಸ್ಸಿನ ಉಕ್ತೆ ಮೊದಲಾದ ಇಪ್ಪತ್ತಾರು ಛಂದೋವರ್ಗಗಳಲ್ಲಿ ಪ್ರತಿಯೊಂದರಲ್ಲಿಯೂ ಬಗೆಬಗೆಯ ಗುರುಲಘು ವಿನ್ಯಾಸವಿರುವ ವೃತ್ತಗಳು ಹೊರಡುತ್ತವೆಯಷ್ಟೆ. ಅವುಗಳನ್ನು ಗುರುತಿಸುವುದಕ್ಕೆ ಅಳೆಯುವುದಕ್ಕೆ ಮೂರು ಅಕ್ಷರಗಳ (ತ್ರಿಕ) ಗಣನಾಂಗವನ್ನು ಈಚೆಗೆ ಕಲ್ಪಿಸಿಕೊಳ್ಳಲಾಯಿತು. ಈ ತ್ರಿಕ ವರ್ಣಸಂಗೀತದ ಎಂಟು ವಿಭಿನ್ನ ರೀತಿಯ ಲಯಗಳನ್ನು ತೋರಿಸುವುದಾಗಿದ್ದು, ಆ ಲಯಗಳನ್ನು ಮಯರಸತಜಭನ ಎಂಬ ಸಂಜ್ಞೆಗಳು ಗುರುತಿಸುತ್ತವೆ. ಅಕ್ಷರಗಳು ಗುರುವಾಗಲಿ ಲಘುವಾಗಲಿ ವೃತ್ತಪಾದವನ್ನು ಮೂರು ಅಕ್ಷರಗಳಿಗೆ ಒಂದು ಗಣವಾಗಿ ಒಡೆಯುತ್ತ ಹೋಗಿ ಈ ಸಂಜ್ಞೆಗಳ ಮೂಲಕವಾಗಿ ವೃತ್ತರಚನೆಯನ್ನು ಕಂಡುಹಿಡಿಯುವುದು ರೂಢಿಯಾಗಿದೆ. ಇಂಥ ಗಣವಿಭಜನೆಗೆ ವರ್ಣಗಣವೆನ್ನಲಾಗುವುದು. ಮಾತ್ರಾವೃತ್ತಗಳು ಕೂಡ ವರ್ಣಮಾತ್ರೆಗಳಿಂದ ಕಟ್ಟಿದವೇ ಆಗಿವೆ. ಇಲ್ಲಿ ಪ್ರತಿ ಪಾದದಲ್ಲಿಯೂ ಇಷ್ಟಿಷ್ಟು ಗಣಗಳೆಂಬ ಸಾಮಾನ್ಯ ನಿಯಮವಿರುತ್ತದೆ. ಖಚಿತವಾದ ಗಣವಿಭಾಗವಿರುತ್ತದೆ. ಕೆಲವು ಕಡೆಗಳಲ್ಲಿ ಲಘು ಗುರುಗಳ ಜೋಡಣೆಯಲ್ಲಿ ಒಂದು ಕ್ರಮವನ್ನೂ, ವಿಧಿನಿಷೇಧಗಳನ್ನೂ ಹೇಳಿರುತ್ತದೆ. ಎರಡರಿಂದ ಎಂಟು ಮಾತ್ರೆಗಳವರೆಗೆ ಮಾತ್ರಾಗಣಗಳ ವ್ಯಾಪ್ತಿಯಿದ್ದರೂ ಕನ್ನಡದಲ್ಲಿ ಮೂರು ನಾಲ್ಕು ಮತ್ತು ಐದು ಮಾತ್ರೆಗಳ ಗಣಗಳೇ ಹೆಚ್ಚು ಬಳಕೆಯಾಗತಕ್ಕವಾಗಿವೆ.

 ಅಂಶಗಣಗಳು ಇಂಥ ಯಾವ ನಿರ್ಬಂಧಗಳಿಗೂ ಒಳಗಾದವಲ್ಲ. ಇಲ್ಲಿ ಗಣಗಳನ್ನು ಕಟ್ಟುವ ಅಂಶಗಳು ವರ್ಣಮಾತ್ರಾಪ್ರಮಾಣದ ಬರಿಯ ಅಕ್ಷರಗಳಿಂದಾದವಲ್ಲ. ಎಂದರೆ ಬರಿಯ ಲಘು ಗುರುಗಳಿಂದಾದುವಲ್ಲ. ಅಕ್ಷರಗಳು ಗಣದಿಂದ ಗಣಕ್ಕೆ ಪಾದದಿಂದ ಪಾದಕ್ಕೆ ಹೆಚ್ಚೋ ಕಡಿಮೆಯೋ ಆಗುತ್ತಿರುತ್ತವೆ. ಬ್ರಹ್ಮದಲ್ಲಿ ಮೂರರಿಂದ ನಾಲ್ಕರವರೆಗೆ, ವಿಷ್ಣುವಿನಲ್ಲಿ ನಾಲ್ಕರಿಂದ ಆರರವರೆಗೆ ರುದ್ರದಲ್ಲಿ ಐದರಿಂದ ಎಂಟರವರೆಗೆ ಮಾತ್ರೆಗಳು ಸೇರಬಹುದಾದ್ದರಿಂದ ಅಕ್ಷರದ ಮಾತ್ರಾಪ್ರಮಾಣ ಪದ್ಯಲಯದ ಅವಶ್ಯಕತೆಗೆ ತಕ್ಕಂತೆ ಹಿಗ್ಗುವುದು ತಗ್ಗುವುದು ಆಗಬಹುದಾಗಿದೆ. ಎಂದರೆ ಒಂದು ಗಣದ ಒಟ್ಟು ವಿಸ್ತಾರವನ್ನು ಇನ್ನೊಂದು ಗಣದ ಒಟ್ಟು ವಿಸ್ತಾರದೊಡನೆ ಸರಿತೂಗಿಸಿ ತಾಳಗತಿಯನ್ನು ಸಾಧಿಸಬಹುದಾಗಿದೆ. ಹ್ರ್ರಸ್ವದೀರ್ಘಾಕ್ಷರಗಳನ್ನು ಅವಶ್ಯಕತೆಗೆ ತಕ್ಕಂತೆ ಹಿಗ್ಗಿಸಿ ಕುಗ್ಗಿಸಿ ಲಯಾನುಗುಣವಾಗಿ ಉಚ್ಚಾರಾಂಶಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಹ್ರಸ್ವದೀರ್ಘಾಕ್ಷರಗಳ ಸಂಖ್ಯೆಯಲ್ಲಿಯೂ ವಿನ್ಯಾಸಕ್ರಮದಲ್ಲಿಯೂ ಸ್ವಯಂಚಾಲಿತವಾದ ಸ್ವಾತಂತ್ರ್ಯ, ಲಯಗತಿಯಂತೆ ಏರ್ಪಡುವ ಗಣವ್ಯವಸ್ಥೆ, ಗಣಗಣಗಳಿಗೆ ಪರಸ್ಪರವಾಗಿ ಸಮಭಾರ-ಇವು ಅಂಶಗಣದ ಲಕ್ಷಣಗಳು. ಕೆಲವು ಸಂದರ್ಭಗಳಲ್ಲಿ ಅಕ್ಷರಗಳ ನ್ಯೂನಾಧಿಕ್ಯಗಳು ಒಂದು ಮಿತಿಗಿಂತ ಹೆಚ್ಚಾಗಿರುವುದುಂಟು, ಆಡುಮಾತು ಬರೆವಣಿಗೆಯಲ್ಲಿ ಬಗೆಬಗೆಯ ರೂಪವ್ಯತ್ಯಾಸಗಳನ್ನು ಪಡೆಯುವುದುಂಟು. ಆಗ ಗಣಗಳು ಗೊತ್ತಾದ ತಾಳ ಮಾನಕ್ಕೆ ಹೊಂದದೆ ಹೋಗುತ್ತವೆ, ನಿಷಿದ್ಧವಾದ ಅಕ್ಷರವಿನ್ಯಾಸ ಎದುರಾಗುತ್ತದೆ. ಆದರೆ ಅಂಶಛಂದಸ್ಸಿನಲ್ಲಿ ತಾಳಮಾನತೆಯಲ್ಲ. ಗೇಯಮಾನತೆಯೇ ಪ್ರಧಾನವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಶುದ್ಧ ಅಂಶಲಯ ತಾಳದ ಕಟ್ಟು ಮೀರಿದ್ದು (ತಾಲವರ್ಜಿತಾ). ತ್ರಿಪದಿ ಸಾಂಗತ್ಯದಂಥ ಕನ್ನಡದ ಮೆಚ್ಚಿನ ಮಟ್ಟುಗಳನ್ನು ಬೇರೆ ಬೇರೆ ಧಾಟಿಗಳಲ್ಲಿ ಸ್ಥಾಯಿಗಳಲ್ಲಿ ಬೇಕಾದ ಕಡೆ ಸ್ವರದ ಏರಿಳಿತಗಳನ್ನೂ ಒತ್ತುಗಳನ್ನೂ ತಂದು ಹಾಡುವುದನ್ನು ಆಲಿಸಿದರೆ ಇದು ಎಷ್ಟೋ ಕಡೆಗಳಲ್ಲಿ ತಾಳಸಂಗೀತದ ಕಾಲಮಾತ್ರೆಯೂ ಆಲಾಪನೆಯೂ ಮೌನವೂ ಉಚ್ಚಾರಾಂಶಗಳನ್ನು ಹೊಂದಿಸಿಕೊಡುತ್ತವೆ. ಅಂಶಗಣವೇ ದ್ರಾವಿಡ ಲಯವನ್ನು ರೂಪಿಸುವ ಘಟಕ. ನಿಯಮಕ್ಕೆ ಒಳಗಾಗಿರುವಂತೆಯೇ ಅದನ್ನು ಮೀರಿರುವುದು ಕೂಡ ಅದರ ಸಹಜ ಲಕ್ಷಣ.

 ಇಲ್ಲಿ ಅಂಶಗಣರಚನೆಯ ಸಾಮಾನ್ಯ ಸ್ವರೂಪವನ್ನು ನಿದರ್ಶಿಸಲು ಮೂರು ಉದಾಹರಣೆಗಳನ್ನು ಕೊಡಲಾಗಿದೆ; ಅಂಶ ಛಂದಸ್ಸಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ತ್ರಿಪದಿಯಲ್ಲಿ ಒಟ್ಟು 11 ಅಂಶಗಣಗಳಿದ್ದು, 6 ಮತ್ತು 10 ನೆಯವು ಬ್ರಹ್ಮಗಣಗಳೂ ಉಳಿದವು ವಿಷ್ಣುಗಣಗಳೂ ಆಗಿರುತ್ತವೆಯೆಂಬುದು ಸಾಮಾನ್ಯ ನಿಯಮ.

ತೊŠಟ್ಟಿ‰ಲ‰ | ಹೊ‰ತು‰ಕೊŠಂಡು‰ | ತೌŠರ್Šಬಣ‰್ಣ | ಉ‰ಟು‰ಕೊ…Šಂಡು‰

ಅ…Šಪ‰್ಪ ಕೊ | ಟ್ಟೆŠಮ್ಮೆ‰ | ಹೊ‰q‰ÀಕೊŠಂಡು‰ | ತ‰ವ‰ರೂŠರು‰ |

ತಿŠಟŠ್ಹತಿ‰್ತ | ತಿ‰ರು‰ಗಿ‰ | ನೋŠಡ್ಯಾŠಳ‰ || (ಜನಪದಗೀತೆ)

ಅಂಶಛಂದಸ್ಸಿನ್ಲಲ್ಲಿ ತ್ರಿಪದಿಯಂತೆಯೇ ಜನಪ್ರಿಯವೂ ಹಾಡುಗಬ್ಬಗಳಿಗೆ ವಾಹಕವೂ ಆಗಿರುವ ಸಾಂಗತ್ಯದಲ್ಲಿ ಒಟ್ಟು 14 ಅಂಶಗಣಗಳಿದ್ದು 7 ಮತ್ತು 14 ನೆಯವು ಬ್ರಹ್ಮಗಣಗಳೂ ಉಳಿದವು ವಿಷ್ಣುಗಣಗಳೂ ಆಗಿರುತ್ತವೆಯೆಂಬುದು ಸಾಮಾನ್ಯ ನಿಯಮ.

ತ‰ನು‰ ಜಿ‰£‰À | ಗೃ‰ಹ‰ವೆಂŠದು‰ | ಮ‰£‰À ಸಿಂŠಹ‰ | ಪೀŠo‰ÀವೆಂŠ | z‰Àನು‰ಪ‰ ಮಾŠ | ತ್ಮ‰ನೆ‰ ಜಿ‰£‰À | ನೆಂದು |

ನೆ‰£‰Àº‰ÀನೆŠ | ಲ್ಲ‰ª‰À ಬಿŠಟ್ಟು‰ | PŠÀಣ್ಮುŠಚಿ‰್ಚ | ನೋŠಳ್ಪಾŠU‰À |

ಜಿ‰£‰ÀನಾŠಥ‰ | ತೋŠರು‰ವ‰ | ನೊ‰¼‰ÀU‰À ||    (ಭರತೇಶವೈಭವ)

ತ್ರಿಪದಿ ಮತ್ತು ಸಾಂಗತ್ಯಗಳನ್ನು ಬಿಟ್ಟರೆ, ಚಂಪೂಕಾವ್ಯಗಳಲ್ಲಿ ಪ್ರಾತಿನಿಧಿಕವಾಗಿ ಬಳಕೆಯಾಗಿರುವ ಪಿರಿಯಕ್ಕರದಲ್ಲಿ ಪ್ರತಿಪಾದದಲ್ಲಿಯೂ 1 ಬ್ರಹ್ಮ 5 ವಿಷ್ಣು 1 ರುದ್ರ ಹೀಗೆ ಅನುಕ್ರಮವಾಗಿ ಗಣಗಳು ಬರುತ್ತವೆ; ವಿಷ್ಣುಗಣಗಳ ಸ್ಥಾನದಲ್ಲಿ ಬ್ರಹ್ಮಗಣಗಳು ಬರುವುದು ಸಾಮಾನ್ಯ.

ಈŠU‹Àಳ್Š | ನಿŠೀನಿŠರ್ದು‰ | ನೋŠನಿ‰¸‰É | ನೋŠಂತು‰ ಮ‰ | ಹಾŠಬ‰ಳŠಂ | ಲ‰ಲಿ‰ತಾŠಂUŠÀಂ | ವŠಜ‰್ರಜಂŠಘŠ |

ಭೊŠೀU‰À | ಭೂŠಮಿ‰ಜಂŠ | ಶ್ರೀŠzs‰Àg‰À | ದೇŠವಂŠ | ಸು‰ವಿ‰ಧಿ‰ £‰À | ರಾŠದಿ‰üಪ‰ | £ŠÀಚ್ಯು‰ತೇŠಂದŠ್ರ |

ಸಾŠಗ‰ ರಾಂŠತಂŠ | ನೆ‰ಲ‰ ನೆ‰ನಿ‰ | v‰Àನಿ‰ತು‰ಮŠಂ | ಚŠP‰À್ರದಿಂŠ | ¨‰É¼‰ÀPŠÉಯ್ಸಿ‰ | ವŠಜ್ರ‰ನಾŠಬಿ‰ü |

ಯಾŠಗಿ‰ | ¸ŠÀರ್ವಾŠರ್ಥ‰ | ಸಿŠದ್ದಿ‰ಯೋŠಳ್ | ಪುŠಟಿ‰್ಟ | ¨‰s  (ಆದಿಪುರಾಣ)

(ನೋಡಿ- ಕನ್ನಡ-ಛಂದಸ್ಸು)

(ಟಿ.ವಿ.ವಿ.)