ಕರಿಯಂಜುವುದು ಅಂಕುಶಕ್ಕಯ್ಯಾ ಗಿರಿಯಂಜÅವುದು ಕುಲಿಶಕ್ಕಯ್ಯಾ ತಮಂಧವಂಜುವುದು ಜ್ಯೋತಿಗಯ್ಯಾ ಕಾನನವಂಜುವುದು ಬೇಗೆಗಯ್ಯಾ ಪಂಚಮಹಾಪಾತಕವಂಜುವುದು ಕೂಡಲಸಂಗನ ನಾಮಕ್ಕಯ್ಯಾ. 75