ನಿಧಾನವನರಸಿಹೆನೆಂದು ಹೋದಡೆ ವಿಘ್ನಬಪ್ಪುದು ಮಾಬುದೆ ಸದಾಶಿವನೆಂದಡೆ ಬೆದರಟ್ಟಿ ಸುಡುವುದು ಮಾಬುದೆ ಹದುಳಿಗನಾಗಿ ಉಳಿದಡೆ ಪದವನೀವ ಕಾಣಾ ಕೂಡಲಸಂಗಮದೇವ.