ಸಕಲಕ್ರಿಯೆಗಳಿಗಿದು ಕವಚ ಸಕಲವಶ್ಯಕ್ಕಿದು ಶುಭತಿಲಕ ಸಕಲಸಂಪದಕ್ಕೆ ತಾಣವಿದು ಅಘಟಿತ ಘಟಿತವೆನಿಸುವ ಅನುಪಮ ತ್ರಿಪುಂಡ್ರ. ಅಣುಮಾತ್ರ ವಿಭೂತಿಯ ಪಣಿಯೊಳಿಡೆ ಎಣಿಕೆಯಿಲ್ಲದ ಭವಪಾಶ ಪರಿವುದು. ತ್ರಿಣಯ ನೀನೊಲಿದು ಧರಿಸಿದೆಯೆಂದೆನೆ ಆನು ಧರಿಸಿ ಬದುಕಿದೆ ಕೂಡಲಸಂಗಯ್ಯಾ.