ನಿಮ್ಮ ವಚನವೆನ್ನ ಪುಣ್ಯವೆಂಬುದು. ಹುಸಿಯಾಯಿತ್ತು ನೋಡಾ ಶಾಸ್ತ್ರದ ವಚನ ಹೋತಿಂಗೆ ಮಾರಿ ಎಂತು ನಂಬುವೆನಯ್ಯಾ ? ನಾನು ಕೊಲ್ಲೆನು ನೇಣು ಕೊಂದಿತೆಂಬ ಸೂನೆಗಾರರನೇನೆಂಬೆ ಕೂಡಲಸಂಗಮದೇವಾ.