ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನೆಕ್ಟಿಕಟ್

ವಿಕಿಸೋರ್ಸ್ದಿಂದ

ಕನೆಕ್ಟಿಕಟ್ : ಅಮೆರಿಕ ಸಂಯುಕ್ತಸಂಸ್ಥಾನದ ರಾಜ್ಯಗಳಲ್ಲೊಂದು. ಉತ್ತರದಲ್ಲಿ ಮ್ಯಾಸಚೂಸೆಟ್ಸ್‌, ಪುರ್ವದಲ್ಲಿ ರೋಡ್ ಐಲೆಂಡ್, ದಕ್ಷಿಣದಲ್ಲಿ ಲಾಂಗ್ ಐಲೆಂಡ್ ಜಲಸಂಧಿ, ಪಶ್ಚಿಮದಲ್ಲಿ ನ್ಯೂ ಯಾರ್ಕ್-ಇವು ಇದರ ಮೇರೆಗಳು. ವಿಸ್ತೀರ್ಣದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ

48ನೆಯ ರಾಜ್ಯ. ರೋಡ್ ಐಲೆಂಡ್ ಮತ್ತು ಡೆಲವೇರ್ ರಾಜ್ಯಗಳು ಮಾತ್ರ ಇದಕ್ಕಿಂತ ಚಿಕ್ಕವು. ವಿಸ್ತೀರ್ಣ 12973.2599 ಚಕಿಮೀ ಜನಸಂಖ್ಯೆ 35,96,080 (2013). ರಾಜಧಾನಿ ಹಾರ್ಟ್ಫರ್ಡ್. ಈ ರಾಜ್ಯದ ಪಶ್ಚಿಮ ಭಾಗ ಪುರ್ವಕ್ಕಿಂತ ಎತ್ತರವಾಗಿದ್ದು, ಮಧ್ಯದಲ್ಲಿರುವ ಕನೆಕ್ಟಿಕಟ್ ನದೀಕಣಿವೆಯ ಕಡೆಗೆ ಇಳಿಜಾರಾಗಿದೆ. ತೀರ ಡೊಂಕಾಗಿರುವುದರಿಂದ ಬಂದರುಗಳಿಗೆ ಅನುಕೂಲಕಾರಿ. ರಾಜ್ಯದ ಚಳಿಗಾಲದ ಸರಾಸರಿ ಉಷ್ಣತೆ 25º ಫ್ಯಾ. ಮತ್ತು 30º ಫ್ಯಾ.

ನಡುವೆಯೂ ಬೇಸಗೆಕಾಲದ ಸರಾಸರಿ ಉಷ್ಣತೆ 65º ಫ್ಯಾ. ಮತ್ತು 70º ಫ್ಯಾ. ನಡುವೆಯೂ ಇರುತ್ತವೆ. ವಾರ್ಷಿಕ ಸರಾಸರಿ ಅವಪಾತದ್ರವ (ಪ್ರೆಸಿಪಿಟೇಷನ್) 45ಳಿ. ಇದು ವರ್ಷವೀಡೀ ಸಮನಾಗಿ ಹಂಚಿಕೆಯಾಗಿದೆ. ಇದರಲ್ಲಿ ಬಹುಭಾಗ ಹಿಮ. , ಚೆಸ್ನಟ್, ಚೆಸ್ನಟ್ ಓಕ್

ಮತ್ತು ಪೀತ ಪಾಪ್ಲರ್ಗಳ ಕಾಡೇ ಕನೆಕ್ಟಿಕಟಿನ ಸ್ವಾಭಾವಿಕ ಸಸ್ಯ. ಈಶಾನ್ಯದಲ್ಲಿ ಈ ಮರಗಳ ಜೊತೆಗೆ ಮೇಪಲ್, ಹೆಮ್ಲಾಕ್, ಬೀಚ್ ಮತ್ತು ಬರ್ಚ್ಗಳೂ ಇದ್ದುವು. ಈಗ ಕಾಡುಗಳು ಬಲು ಕಡಿಮೆ. ಕನೆಕ್ಟಿಕಟಿನಲ್ಲಿ ಕೈಗಾರಿಯೇ ಪ್ರಧಾನವಾದರೂ ವ್ಯವಸಾಯವೂ ತಕ್ಕಮಟ್ಟಿಗೆ ನಡೆಯುತ್ತದೆ. ಒಳ್ಳೆಯ ನೆಲಕ್ಕೆ ಮಾತ್ರ ಕೃಷಿಕಾರ್ಯ ಸೀಮಿತ. ಹಸಿಮೇವು, ಒಣಹುಲ್ಲು, ಓಟ್ಸ್‌, ಮುಸುಕಿನಜೋಳ. ಹಗೇವುಮೇವು. ಅಲೂಗೆಡ್ಡೆ, ಹೈನು ಮುಖ್ಯ ಉತ್ಪನ್ನ. ಕೆಲವು ಸುಂದರ

ಹೊಲಗಳು ನಿಸರ್ಗಸೌಂದರ್ಯದ ಬೀಡುಗಳು; ಇವನ್ನು ನೋಡಲು ಬೇಸುಗೆಯ ದಿನಗಳಲ್ಲಿ ವಿಹಾರಾರ್ಥಿಗಳು ತಂಡತಂಡವಾಗಿ ಬರುತ್ತಾರೆ. ಕನೆಕ್ಟಿಕಟ್ ನದಿಯ ಮೇಲಣ ಸೋಪಾನನೆಲದ ಕೃಷಿಕ್ಷೇತ್ರಗಳು ಬಲು ಉತ್ಕೃಷ್ಟ. ಹೊಗೆಸೊಪ್ಪು, ಚುಟ್ಟಾ ಎಲೆ-ಇವು ಇಲ್ಲಿಯ

ವಿಶಿಷ್ಟ ಉತ್ಪನ್ನಗಳು. ಈ ರಾಜ್ಯದಲ್ಲಿ ಕೈಗಾರಿಕೆಗಳು ವಿಶೇಷವಾಗಿ ಬೆಳೆದಿವೆ. ಇವಕ್ಕಾಗಿ ಕಚ್ಚಾ ಸಾಮಾಗ್ರಿ ಹೆಚ್ಚಾಗಿ ಆಮದಾಗುತ್ತದೆ. ಪರಂಪರೆಯಾಗಿ ಬಂದ ತಂತ್ರಕೌಶಲ ಅಗತ್ಯವಾದ ಕೈಗಾರಿಕೆಗಳು ಇಲ್ಲಿ ಬೆಳೆದಿವೆ. ಜವಳಿ, ಕಬ್ಬಿಣದ ಸಾಮಾನು. ಗಡಿಯಾರ, ಒಡವೆ, ಅಗ್ನ್ಯಸ್ತ್ರ-ಇವು

ಇಲ್ಲಿಯ ಕೆಲವು ಮುಖ್ಯ ಉತ್ಪನ್ನಗಳು. ಮುಖ್ಯವಾದ ನಗರಗಳಿವು : ಹಾರ್ಟ್ಫರ್ಡ್, ನ್ಯೂ ಹೇವನ್, ಬ್ರಿಜ್ಪೋರ್ಟ್, ವಾಟರ್ಬೆರಿ ಮತ್ತು ಸ್ಟ್ಯಾಂಫರ್ಡ್. (ಸಿ.ಎಂ.)