ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬೆ, ಅಂಬಿಕೆ, ಅಂಬಾಲಿಕೆ

ವಿಕಿಸೋರ್ಸ್ದಿಂದ

ಅಂಬೆ, ಅಂಬಿಕೆ, ಅಂಬಾಲಿಕೆ

[ಸಂಪಾದಿಸಿ]

ಮಹಾಭಾರತದ ಕಥೆಯ ಪ್ರಕಾರ ಕಾಶೀರಾಜನ ಮಕ್ಕಳು. ತಂದೆ ಇವರಿಗೆ ಸ್ವಯಂವರವನ್ನು ಏರ್ಪಡಿಸಿದಾಗ ಭೀಷ್ಮ ಈ ಮೂವರನ್ನೂ ಅಪಹರಿಸಿದ. ಅಂಬೆ ತಾನು ಸಾಲ್ವರಾಜನನ್ನು ಪ್ರೀತಿಸಿದುದಾಗಿ ಹೇಳಲು ಭೀಷ್ಮ ಅವಳನ್ನು ಅವನ ಬಳಿಗೆ ಕಳುಹಿಸಿದ. ಆದರೆ ಭೀಷ್ಮ ಅಪಹರಿಸಿದ ಅವಳನ್ನು ಸಾಲ್ವ ಸ್ವೀಕರಿಸಲಿಲ್ಲ. ಅವಳು ಹಿಂತಿರುಗಿ ಬಂದು ತನ್ನನ್ನು ಭೀಷ್ಮನೇ ಮದುವೆಯಾಗಬೇಕೆಂದು ಹಠ ಹಿಡಿದಳು. ಭೀಷ್ಮ ಒಪ್ಪಲಿಲ್ಲ. ಅನಂತರ ಶಿಖಂಡಿಯಾಗಿ ಜನ್ಮತಾಳಿ ಭೀಷ್ಮನ ಮೇಲೆ ಸೇಡು ತೀರಿಸಿಕೊಂಡಳು.

ಭೀಷ್ಮನು ಅಂಬಾಲಿಕೆ ಮತ್ತು ಅಂಬಿಕೆಯರನ್ನು ತನ್ನ ಮಲತಮ್ಮನಾದ ವಿಚಿತ್ರ ವೀರ್ಯನಿಗೆ ಮದುವೆ ಮಾಡಿದ. ಸಂತಾನವಿಲ್ಲದೆ ಅವನು ತೀರಿಕೊಳ್ಳಲು, ಇವರು ಅತ್ತೆ ಸತ್ಯವತಿಯ ಆಜ್ಞೆಗೆ ವಿಧೇಯರಾಗಿ ನಿಯೋಗ ಪದ್ಧತಿಯಂತೆ ವ್ಯಾಸರಿಂದ ಅಂಬಾಲಿಕೆ ಪಾಂಡು ರಾಜನನ್ನೂ ಅಂಬಿಕೆ ಧೃತರಾಷ್ಟ್ರನನ್ನೂ ಪಡೆದರು. ಕೊನೆಯಲ್ಲಿ ಇವರಿಬ್ಬರೂ ಅತ್ತೆಯೊಡನೆ ತಪಸ್ಸಿಗಾಗಿ ಕಾಡಿಗೆ ಹೋದರು.