ಹರಿಕಥಾಮೃತಸಾರ/ಸರ್ವಪ್ರತೀಕ ಸಂಧಿ (ಸರ್ವ ಸಮರ್ಪಣ)

ವಿಕಿಸೋರ್ಸ್ದಿಂದ

ಆವ ಪರಬೊಮ್ಮನತಿ ವಿಮಲಾಂ ಗಾವ ಬದ್ಧರುಯೆಂದೆನಿಪ ರಾ ಜೀವ ಭವ ಮೊದಲಾದಮರರನು ದಿನದಿ ಹರಿಪದವ | ಸೇವಿಪರಿಗನುಕೂಲರಲ್ಲದೆ ತಾವು ಇವರನ ಕೆಡಿಸಬಲ್ಲರೆ ಶ್ರೀವಿಲಾಸಾಸ್ಪದನ ದಾಸರಿಗುಂಟೆ ಅಪಜಯವು ||೧||

ಶ್ರೀದನಂಘ್ರಿ ಸರೋಜಯಗಳೇ ಕಾದಶ ಸ್ಥಾನಾತ್ಮದೊಳಗಿ ಟ್ಟಾದರದಿ ಸಂತುತಿಸುವವರಿಗೀ ನವಗ್ರಹವು | ಆದಿತೇಯರು ಸಂತಾತಾಧಿ ವ್ಯಾಧಿಗಳ ಪರಿಹರಿಸುತವರನು ಕಾದುಕೊಂಡಿಹರೆಲ್ಲರೊಂದಾಗೀಶನಾಜ್ಞೆಯಲಿ ||೨||

ಮೇದಿನಿಯ ಮೇಲುಳ್ಳ ಗೋಷ್ಪಾ ದೋದಕಗಳೆಲ್ಲ ಮಲ ತೀರ್ಥವು ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ಶ್ರೀದನ ಪ್ರತಿಮೆಗಳು ಅವರುಂ ಬೋದನವೆ ನೈವೇದ್ಯ ನಿತ್ಯದಿ ಹಾದಿ ನಡೆವುದೆ ನರ್ತನಗಳೆಂದರಿತವನೆ ಯೋಗಿ ||೩||

ಸರ್ವದೇಶವು ಪುಣ್ಯ ದೇಶವು ಸರ್ವಕಾಲವು ಪರ್ವ ಕಾಲವು ಸರ್ವ ಜೀವರು ದಾನಪಾತ್ರರು ಮೂರು ಲೋಕದಲಿ | ಸರ್ವ ಮಾತುಗಳೆಲ್ಲಾ ಮಂತ್ರವು ಸರ್ವ ಕೆಲಸಗಳೆಲ್ಲ ಪೂಜೆಯು ಶರ್ವವಂದ್ಯನ ವಿಮಲಮೂರ್ತಿ ಧ್ಯಾನ ಉಳ್ಳರಿಗೆ ||೪||

ದೇವಖಾತ ತಟಾಕ ವಾಪಿ ಸ ರೋವರಗಳಭಿಮಾನಿ ಸುರರು ಕ ಳೇವರದೊಳಿಹ ರೋಮಕೂಪಗಳೊಳಗೆ ತುಂಬಿಹರು | ಆವಿಯದ್ಗಂಗಾದಿನದಿಗಳು ಭಾವಿಸುವುದೆಪ್ಪತ್ತೆರಡೆನಿಪ ಸಾವಿರ ಸುನಾಡಿಗಳೊಳಗೆ ಪ್ರವಹಿಸುತಲಿಹವೆಂದು ||೫||

ಮೂರು ಕೋಟಿಯ ಮೇಲೆ ಶೋಭಿಪ ಈರಧಿಕ ಎಪ್ಪತ್ತು ಸಾವಿರ ಮಾರುತಾಂತರ್ ಯಾಮಿ ಮಾಧವ ಪ್ರತಿದಿವಸದಲ್ಲಿ | ತಾ ರಮಿಸುತಿಹನೆಂದು ತಿಳಿದಿಹ ಸೂರಿಗಳೇ ದೇವತೆಗಳವರ ಶ ರೀರಗಳೇ ಸುಕ್ಷೇತ್ರವವರರ್ಚನೆಯು ಹರಿ ಪೂಜೆ ||೬||

ಶ್ರೀವರನಿಗಭಿಷೇಕವೆಂದರಿ ದೀವಸುಂಧರೆಯೊಳಗೆ ಬಲ್ಲವ ರಾವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು | ತಾ ಒಲಿದು ಬಂದಲ್ಲೆ ನೆಲೆಗೊಂ ಡೀವರಖಿಳಾರ್ಥಗಳನರಿಯದ ಜೀವರಮರ ತರಂಗಿಣಿಯನೈದಿದರು ಫಲವೇನು ||೭||

ನದ ನದಿಗಳಿಳೆಯೊಳಗೆ ಪರಿವುವು ಉದಧಿಪರಿಯಂತರದಿ ತರುವಾ ಯದಲಿ ರಮಿಸುವುವಲ್ಲಿ ತನ್ಮಯವಾಗಿ ತೋರದಲೆ | ವಿಧಿ ನಿಷೇಧಗಳಾಛರಿಸುವರು ಬುಧರು ಭಗವದ್ರೂಪ ಸರ್ವ ತ್ರದಲಿ ಚಿಂತನೆ ಬರಲು ತ್ಯಜಿಸುವರಖಿಳ ಕರ್ಮಗಳ ||೮||

ಕಲಿಯೆ ಮೊದಲಾದಖಿಳ ದಾನವ ರೊಳಗೆ ಬ್ರಹ್ಮ ಭವಾದಿ ದೇವ ರ್ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ ಅವರವರ | ಕಲುಷ ಕರ್ಮವ ಮಾಡಿ ಮಾಡಿಸಿ ಜಲರುಹೇಕ್ಷಣಗರ್ಪಿಸುತ ನಿ ಶ್ಚಲ ಸುಭಕ್ತಿ ಜ್ಞಾನಪೂರ್ಣರು ಸುಖಿಪರವರೊಳಗೆ ||೯||

ಆವ ಜೀವರೊಳಿದ್ದರೇನಿ ನ್ನಾವ ಕರ್ಮನ ಮಾಡಲೇನಿ ನ್ನಾವ ಗುಣ ರೂಪಗಳುಪಾಸಲೆ ಮಾಡಲೇನವರು | ಕಾವನಯ್ಯನ ಪರಮ ಸತ್ಕರು ಣಾವ ಲೋಕನ ಬಲದಿ ಚರಿಸುವ ದೇವತೆಗಳನು ಮುಟ್ಟಲಾಪವೆ ಪಾಪ ಕರ್ಮಗಳು ||೧೦||

ಪತಿಯೊಡನೆ ಮನಬಂದ ತೆರದಲಿ ಪ್ರತಿ ದಿವಸದಲಿ ರಮಿಸಿ ಮೋದಿಸಿ ಸುತರ ಪಡೆದಿಳೆಯೊಳು ಜಿತೇಂದ್ರಿಯಳೆಂದು ಕರೆಸುವಳು | ಕೃತಿಪತಿ ಕಥಾಮೃತ ಸುಭೋಜನ ರತ ಮಹಾತ್ಮರಿಗಿತರ ದೋಷ ಪ್ರತತಿಗಳು ಸಂಬಂಧಿಸುವವೇನಚ್ಯುತನ ದಾಸರಿಗೆ ||೧೧||

ಸೂಸಿಬಹ ನದಿಯೊಳಗೆ ತನ್ನ ಸ ಹಾಸ ತೋರುವೆನೆನುತ ಜಲಕಿ ದಿರೀಸಿದರೆ ಕೈ ಸೋತು ಮುಳುಗುವ ಹರಿಯ ಬಿಟ್ಟವನು | ಕ್ಲೇಶವೈದುವನಾದಿಯಲಿ ಸ ರ್ವೇಶ ಕ್ಲುಪ್ತಿಯ ಮಾಡಿದುದ ಬಿ ಟ್ಟಾಸೆಯಿಂದಲಿ ಅನ್ಯರಾರಾಧಿಸುವ ಮಾನವನು ||೧೨||

ನಾನು ನನ್ನದು ಎಂಬ ಜಡಮತಿ ಮಾನವನು ದಿನದಿನದಿ ಮಾಡುವ ಸ್ನಾನ ಜಪ ದೇವಾರ್ಚರೆಯು ಮೊದಲಾದ ಕರ್ಮಗಳ | ದಾನವರು ಸೆಳೆದೊಯ್ವರಲ್ಲದೆ ಶ್ರೀನಿವಾಸರು ಸ್ವೀಕರಿಸ ಮ ದ್ದಾನೆ ಪಕ್ವ ಕಪಿತ್ಥ ಫಲ ಭಕ್ಷಿಸಿದವೋಲಹುದು ||೧೩||

ಧರಿತ್ರಿಯೊಳಗುಳ್ಳಖಿಳ ತೀರ್ಥ ಕ್ಷೇತ್ರ ಚರಿಸಿದರೇನು ಪಾತ್ರಾ ಪಾತ್ರವರಿತನ್ನಾದಿ ದಾನವ ಮಾಡಿ ಫಲವೇನು | ಗಾತ್ರ ನಿರ್ಮಲನಾಗಿ ಮಂತ್ರ ಸ್ತೋತ್ರ ಪಠಿಸಿದರೇನು ಹರಿಸ ರ್ವತ್ರಗತನೆಂದರಿಯದಲೆ ತಾ ಕರ್ತೃ ಎಂಬುವನು ||೧೪||

ಕಂಡ ನೀರೊಳು ಮುಳುಗಿ ದೇಹವ ದಂಡಿಸಿದ ಫಲವೇನು ದಂಡ ಕ ಮಂಡಲಗಳನೆ ಧರಿಸಿ ಯತಿಯೆಂದೆನಿಸಿ ಫಲವೇನು | ಅಂಡಜಾಧಿಪನಂಸಗನ ಪದ ಪುಂಡರೀಕದಿ ಮನವಹರ್ನಿಶಿ ಬಂಡುಣಿಯವೋಲಿರಿಸಿ ಸುಖಪಡದಿಪ್ಪ ಮಾನವನು ||೧೫||

ವೇದಶಾಸ್ತ್ರ ಪುರಾಣ ಕಥೆಗಳ ಓದಿ ಕೇಳಿದರೇನು ಸಕಲ ನಿ ಷೇಧ ಕರ್ಮವ ತೊರೆದು ಸತ್ಕರ್ಮ ಮಾಡೇನು | ಓದನಂಗಳನು ಜರಿದು ಶ್ವಾಸನಿ ರೋಧ ಗೈಸಿದರೇನು ಕಾಮ ಕ್ರೋಧವಳಿಯದೆ ನಾನು ನನ್ನದು ಎಂಬ ಮಾನವನು ||೧೬||

ಏನು ಕೇಳಿದರೇನು ನೋಡಿದ ರೇನು ಓದಿದರೇನು ಪೇಳಿದ ರೇನು ಪಾಡಿದರೇನು ಮಾಡಿದರೇನು ದಿನದಿನದಿ | ಶ್ರೀನಿವಾಸನ ಜನ್ಮ ಕರ್ಮಸ ದಾನುರಾಗದಿ ನೆನೆದು ತತ್ತ ಸ್ಥಾನದಲಿ ತದ್ರೂಪ ತನ್ನಾಮಕನ ಸ್ಮರಿಸದವ ||೧೭||

ಬುದ್ಧಿ ವಿದ್ಯಾ ಬಲದಿ ಪೇಳಿದ ಶುದ್ಧ ಕಾವ್ಯವಿದಲ್ಲ ತತ್ವಸು ಪದ್ಧತಿಗಳನು ತಿಳಿದ ಮಾನವನಲ್ಲ ಬುಧರಿಂದ | ಮಧ್ವವಲ್ಲಭ ತಾನೆ ಹೃದಯದೊ ಳಿದ್ದು ನುಡಿದಂದದಲಿ ನುಡಿದೆನ ಪದ್ಧಗಳ ನೋಡದಲೆ ಕಿವಿಗೊಟ್ಟಾಲಿಪುದು ಬುಧರು ||೧೮||

ಕಬ್ಬಿನೊಳಗಿಹ ರಸ ವಿದಂತನಿ ಗಬ್ಬ ಬಲ್ಲುದೆ ಭಾಗ್ಯ ಯೌವನ ಮಬ್ಬಿನಲಿ ಮೈ ಮರೆದವಗೆ ಹರಿಸುಚರಿತಾಮೃತವು | ಲಭ್ಯವಾಗದು ಹರಿಪದಾಬ್ಜದಿ ಹಬ್ಬಿದತಿ ಸದ್ಭಕ್ತಿ ರಸವುಂ ಡುಬ್ಬಿ ಕೊಬ್ಬಿ ಸುಖಾಬ್ಧಿಯೊಳಗಾಡುವವಗಲ್ಲದಲೆ ||೧೯||

ಖಗವರಧ್ವಜನಂಘ್ರಿ ಭಕುತಿಯ ಬಗೆಯನರಿಯದ ಮಾನವರಿಗಿದು ಒಗಟಿನಂದದಿ ತೋರುತಿಪ್ಪುದು ಎಲ್ಲ ಕಾಲದಲಿ | ತ್ರಿಗುಣ ವರ್ಜಿತನಮಲ ಗುಣಗಳ ಪೊಗಳಿ ಹಿಗ್ಗುವ ಭಾಗವತರಿಗೆ ಮಿಗೆ ಭಕುತಿ ಸುಜ್ಞಾನ ಸುಖವಿತ್ತವರ ರಕ್ಷಿಪುದು ||೨೦||

ಪರಮ ತತ್ವ ರಹಸ್ಯವಿದು ಭೂ ಸುರರು ಕೇಳ್ವುದು ಸಾದರದಿ ನಿ ಷ್ಠುರಿಗಳಿಗೆ ಮೂಢರಿಗೆ ಪಂಡಿತಮಾನಿ ಪಿಶುನರಿಗೆ | ಅರಸಿಕರಿಗಿದು ಪೇಳ್ವುದಲ್ಲನ ವರತ ಭಗವತ್ಪಾದಯುಗಳಾಂ ಬುರುಹ ಮಧುಕರರೆನಿಸುವರಿಗರುಪುವುದು ಮೋದದಲಿ ||೨೧||

ಲೋಕ ವಾರ್ತೆಯಿದಲ್ಲ ಪರಲೋ ಕೈಕನಾಥನ ವಾರ್ತೆ ಕೇಳ್ವರೆ ಕಾಕು ಮನುಜರಿಗಿದು ಸಮರ್ಪಕವಾಗಿ ಸೊಗಯಿಸಲು | ಕೋಕನದ ಪರಿಮಳವು ಷಟ್ಪ್ದ ಸ್ವೀಕರಿಸುವಂದದಲಿ ಜಲಚರ ಭೇಕ ಬಲ್ಲುದೆ ಇದರ ರಸ ಹರಿ ಭಕ್ತಗಲ್ಲದಲೆ ||೨೨||

ಸ್ವಪ್ರಯೋಜನ ರಹಿತ ಸಕಲೇ' ಷ್ಟ ಪ್ರದಾಯಕ ಸರ್ವ ಗುಣ ಪೈ ರ್ಣ ಪ್ರಮೇಯ ಜರಾಮರಣವರ್ಜಿತ ವಿಗತಶೋಕ | ವಿಪ್ರತಮ ವಿಶ್ವಾತ್ಮ ಘೃಣಿ ಸೂ ರ್ಯ ಪ್ರಕಾಶಾನಂತ ಮಹಿಮ ಘೃ ತ ಪ್ರತೀಕಾರಾದಿತಾಂಘ್ತ್ರಿ ಸರೋಜ ಸುರರಾಜ ||೨೩||

ವನಚರಾದ್ರಿ ಧರಾಧರನೆ ಜಯ ಮನುಜ ಮೃಗವರ ವೇಷ ಜಯ ವಾ ಮನ ತ್ರಿವಿಕ್ರಮದೇವ ಜಯ ಭೃಗುರಾಮ ಭೂಮ ಜಯ | ಜನಕಜಾ ವಲ್ಲಭನೆ ಜಯ ರು ಕ್ಮಿಣಿ ಮನೋರಥ ಸಿದ್ಧಿ ಪ್ರದಜಯ ಜಿನ ವಿಮೋಹಕ ಕಲಿವಿದಾರಣ ಜಯ ಜಯಾರಮಣ ||೨೪||

ಸಚ್ಚಿದಾನಂದಾತ್ಮ ಬ್ರಹ್ಮಕ ರಾರ್ಚಿತಾಂಘ್ರಿ ಸರೋಜ ಸುಮನಸ ಪ್ರೋಚ್ಚ ಸನ್ಮಂಗಳದ ಮಧ್ವಾಂತಃಕರಣರೂಢ | ಅಚ್ಯುತ ಜಗನ್ನಾಥವಿಠಲ ನಿಚ್ಚ ಮೆಚ್ಚಿದ ಜನರ ಬಿಡ ಕಾ ಳ್ಗಿಚ್ಚನುಂಡಾರಣ್ಯದೊಳು ಗೋಗೋಪರನು ಕಾಯ್ದ ||೨೫||