೯೮ ರಾಜಾ ರಾಜಸಿಂಹ [ಪ್ರಕರಣ • V\ \ ಕುಳಿತಿರುತ್ತೇನೆ ಹೋಗು, ನಿನಗೆ ಸರಿ ಕಂಡ ಮಾರ್ಗವನ್ನು ಅನುಸರಿಸು' ಎಂದು ಮುಗುಳು ನಗೆ ನಕ್ಕು ಹೇಳಿದನು ಜಯಸಿಂಹನು ರಾಣಾನಿಗೆ ನಮಸಿ ರೂಪನಗರದ ಕಡೆಗೆ ಹೋದನು ಹದಿನಾರನೆಯ ಪ್ರಕರಣ ಜಯಸಿಂಹನ ಕೌಶಲ್ಯ ಜಯಸಿಂಹನು ನಟ್ಟಗೆ ರೂಪನಗರಕ್ಕೆ ಬಂದನು ಸೂರ್ಯನು ಅಸ್ತ್ರವಾಗಿದ್ದನು ಕತ್ತಲೆಯು ಸ್ವಲ್ಪ ಸ್ವಲ್ಪವಾಗಿ ಮುಸುಕುತ್ತಿತ್ತು ಮನೆಗಳಲ್ಲಿ ದೀಎಗೆಗಳನ್ನು ಹತ್ತುತ್ತಿದ್ದರು ಜಯಸಿಂಹಸ ಅಂಗಡಿ ಬೀದಿಗೆ ಬಂದನು ದೀವಿಗಬೆಳಕಿನಲ್ಲಿ ಅಂಗಡಿಗಳು ಸುಶೋಭಿತವಾ ಗಿದ್ದುವು ಜಯಸಿಂಹನಿಗೆ ಬಹಳ ಹಸಿವೆಯಾಗಿತ್ತು, ಅಂಗಡಿಗಳ ಶೋಭೆ ಯನ್ನು ನೋಡುತ್ತ ನಿಲ್ಲು ವಂತಿದ್ದಿಲ್ಲ ಫಲಹಾರದ ಅಂಗಡಿಗೆ ಹೋಗಿ ಕೆಲವು ಔನಸುಗಳನ್ನು ಕೊಂಡನು ಅದನ್ನು ತಿಂದು --ರಡು ಬೊಗಸೆ ನೀರು ಕುಡಿದು ಮುಂದಿನಕೆಲಸಕ್ಕಾಗಿ ಹೊರಟನು. ತನ್ನ ಕೆಲಸಕ್ಕೆ ಯೋಗ್ಯ ಸ್ಥಳವನ್ನು ಹುಡುಕುತ್ತ ಒಬ್ಬ ಎಲೆಮಾ ರುವವಳ ಅಂಗಡಿಗೆ ಹೋದರು ಅದು ಸಾಲುಸಾಲಾದ ದೀಪಗಳಿಂದ ಮನೋಹರವಾಗಿತ್ತು ಅಲ್ಲಿ ಒಂದುಮಗ್ಗಲಿಗ ರತ್ನ ಗಂಪಿಳಿ ಹಾಸಿತ್ತು ಹಾಸಿಗೆಯ ಮೇಲೆ ಲೋಡಿಗೆ ಆತಿಟ್ಟು ಕೊಂಡು ಕುಳಿತಿದ್ದಳು ಶರೀರದ ಕಾಂತಿಯು ಗೌರವರ್ಣ ಸುದಂ ೩೦-೩೫ ವರ್ಷದವಳು ವಿನೋ ದದ ಮಾತುಕಥೆಗಳಲ್ಲಿ ಬಲು ಕುಶಲಳು ಮೊಗಲಸೇನೆಯು ನಾಳೆಬೆಳಿಗ್ಗೆ ರೂಪನಗರದಿಂದ ಹೊರಡುವದಿತ್ತು ತಿಪಾಯಿಗಳೆಲ್ಲ ಸುಖೋಪಭೋ ಗಕ್ಕಾಗಿ ನಗರದಲ್ಲಿ ಅತ್ತಿತ್ತ ಅಲೆಯುತ್ತಿದ್ದರು ಈ ಅಂಗಡಿಗೆ ಬಹಳ
ಪುಟ:ರಾಣಾ ರಾಜಾಸಿಂಹ.djvu/೧೧೨
ಗೋಚರ