ಹರಿಕಥಾಮೃತಸಾರ/ನಾಡೀ ಪ್ರಕರಣ ಸಂಧಿ (ನಾಡೀಪ್ರಕ್ರಿಯ)

ವಿಕಿಸೋರ್ಸ್ದಿಂದ

ವಾಸುದೇವನು ಪ್ರಾಣಮುಖ ತ ತ್ವೇಶರಿಂದಲಿ ಸೇವೆ ಕೈಕೊಳು ತೀ ಶರೀರದೊಳಿಪ್ಪ ಮುವತ್ತಾರು ಸಾಹಸ್ರ ಈ ಸುನಾಡಿಗಳೊಳಗೆ ಶ್ರೀ ಭೂ ಮೀ ಸಮೇತ ವಿಹಾರಗೈವ ಪ ರೇಶನಮಲಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು ||೧||

ಚರಣಗಳೊಳಗಿಹ ನಾಡಿಗಳು ಗ ನ್ನೆರಡು ಸಾವಿರ ಮಧ್ಯ ದೇಹ ದೊ ಳಿರುತಿಹವು ಹದಿನಾಲ್ಕು ಬಾಹುಗಳೊಳಗೆ ಈವೆರಡು | ಶಿರದೊಳಾರು ಸಾಹಸ್ರ ಚಿಂತಿಸಿ ಇರುಳು ಹಗಲಭಿಮಾನಿ ದಿವಿಜರ ನರಿತುಪಾಸನೆ ಗೈವರಿಳೆಯೊಳು ಸ್ವರ್ಗವಾಸಿಗಳು ||೨||

ಬೃಹತೀ ನಾಮಕ ವಾಸುದೇವನು ವಹಿಸಿ ಪುಂಸ್ತ್ರೀರೂಪಗಳ ದೋಷ ವಿ ರಹಿತ ಎಪ್ಪತ್ತೆರಡು ಸಾವಿರ ನಾಡಿಗಳೊಳಗಿದ್ದು | ದ್ರುಹಿಣ ಮೊದಲಾದಮರಗಣ ಸ ನ್ಮಹಿತ ಸರ್ವ ಪ್ರಾಣಿಗಳ ಮಹ ಮಹಿಮ ಸಂತೈಸುವನು ಸಂತತ ಪರಮ ಕರುಣಾಳು ||೩||

ನೂರು ವರುಷಕೆ ದಿವಸ ಮೂವ ತ್ತಾರು ಸಾವಿರವಹವು ನಾಡೀ ಶ ರೀರದೊಳಗಿನಿತಿಹವು ಎಂದರಿತೊಂದು ದಿವಸದಲಿ | ಸೂರಿಗಳ ಸತ್ಕರಿಸಿದವ ಪ್ರತಿ ವಾರದಲಿ ದಂಪತಿಗಳರ್ಚನೆ ತಾ ರಚಿಸಿದವ ಸತ್ಯ ಸಂಶಯವಿಲ್ಲವೆಂದೆಂದು ||೪||

ಚತುರವಿಂಶತಿ ತತ್ವಗಳು ತ ತ್ಪತಿಗಳೆನಿಸುವ ಬ್ರಹ್ಮಮುಖ ದೇ ವತೆಗಳನುದಿನ ಪ್ರತಿ ಪ್ರತಿನಾಡಿಗಳೊಲಿರುತಿದ್ದು| ಚತುರದಶ ಲೋಕದೊಳು ಜೀವ ಪ್ರತತಿಗಳ ಸಂರಕ್ಷಿಸುವ ಶಾ ಶ್ವತನ ತತ್ತಸ್ಥಾನದಲಿ ನೋಡತಲೆ ಮೋದಿಪರು ||೫||

ಸತ್ಯ ಸಂಕಲ್ಪನು ಸದಾ ಎ ಪ್ಪತ್ತೆರಡು ಸಾಹಸ್ರದೊಳು ಮೂ ವತ್ತು ನಾಲಕು ಲಕ್ಷದೈವತ್ತಾರು ಸಾಹಸ್ರ| ಚಿತ್ತ್ರಕೃತಿ ಒಡಗೂಡಿ ಪರಮ ಸು ನಿತ್ಯ ಮಂಗಳ ಮೂರ್ತಿ ಭಕ್ತರ ತೆತ್ತಿಗನು ತಾನಾಗಿ ಸರ್ವತ್ರದಲಿ ಸಂತೈಪ ||೬||

ಮಣಿಗಳೊಳಗಿಹ ಸೂತ್ರದಂದಿ ಪ್ರಣವ ಪಾದ್ಯನು ಸರ್ವ ಚೇತನ ಗಣದೊಳಿದ್ದನವರತ ಸಂತೈಸುವನು ತನ್ನವರ | ಪ್ರಣತ ಕಾಮದ ಭಕ್ತ ಚಿಂತಾ ಮಣಿ ಚಿದಾನಂದೈಕ ದೇಹನು ಅಣು ಮಹದ್ಗತನಲ್ಪರೋಪಾದಿಯಲಿ ನೆಲೆಸಿಪ್ಪ ||7||

ಈ ಸುಷಮ್ನಾದ್ಯಖಿಳ ನಾಡೀ ಕೋಶ ನಾಭಿ ಮೂಲದಲಿ ವೃಷ ಣಾಸನದ ಮಧ್ಯದಲಿ ಇಪ್ಪದು ತುಂದಿ ನಾಮದಲಿ | ಆ ಸರೋಜಾಸನ ಮುಖರು ಮೂ ಲೇಶನಾನಂದಾದಿ ಸುಗುಣೋ ಪಾಸನೆಯ ಗೈಯುತಲಿ ದೇಹಗಳೊಳಗೆ ಇರುತಿಹನು ||೮||

ಸೂರಿಗಳು ಚಿತ್ತೈಸುವುದು ಭಾ ಗೀರಥಿಯೆ ಮೊದಲಾದ ತೀರ್ಥಗ ಳೀರಧಿಕ ಎಪ್ಪತ್ತು ಸಾವಿರ ನಾಡಿಗಳೊಳಿಹವು | ಈ ರಹಸ್ಯವ ಅಲ್ಪ ಜನರಿಗೆ ತೋರಿ ಪೇಳದೆ ನಾಡಿ ನದಿಯೊಳು ಧೀರರನುದಿನ ಮಜ್ಜನವ ಮಾಡುತಲಿ ಸುಖಿಸುವರು ||೯||

ತಿಳಿವುದೀ ದೇಹದೊಳಗಿಹ ಎಡ ಬಲದ ನಾಡಿಗಳೊಳಗೆ ದಿವಿಜರು ಜಲಜ ಸಂಭವ ವಾಯ ವಾಣ್ಯಾದಿಗಳು ಬಲದಲ್ಲಿ | ಎಲರುಣಿಗ ವಿಹಗೇಂದ್ರ ಚಳಿವೆ ಟ್ಟಳಿಯ ಷಣ್ಮಹಿಷಿಯರು ವಾರುಣಿ ಕುಲಿಶಧರ ಕಾಮಾದಿಗಳು ಎಡಭಾಗದೊಳಗಿಹರು ||೧೦||

ಇಕ್ಕೆಲದೊಳಿಹ ನಾಡಿಯೊಳು ದೇ ವರ್ಕಳಿಂದೊಡನಾಡುತಲಿ ಪೊಂ ಬಕ್ಕಿ ದೇರನು ಜೀವರಧಿಕಾರಾನುಸಾರದಲಿ | ತಕ್ಕ ಸಾಧನ ಮಾಡಿ ಮಾಡಿಸು ತಕ್ಕರದಿ ಸಂತೈಪ ಭಕ್ತರ ದಕ್ಕಗೊಡನಸುರರ್ಗೆ ಸತ್ಪುಣ್ಯಗಳನಪಹರಿಪ ||೧೧||

ತುಂದಿವಿಡಿದಾ ಶಿರದ ಪರಿಯಂ ತೊಂದೆ ವ್ಯಾಪಿಸಿ ಇಹುದು ತಾವರೆ ಗಂದನಿಹನದರೊಳಗೆ ಅದಕೀರೈದು ಶಾಖೆಗಳು | ಒಂದಧಿಕ ದಶಕರಣದೊಳು ಸಂ ಬಂಧ ಗೈದಿಹವಲ್ಲಿ ರವಿ ಶಶಿ ಸಿಂಧು ನಾಸತ್ಯಾದಿಗಳು ನೆಲೆಗೊಂಡಿಹರು ಸತತ ||೧೨||

ಪೊಕ್ಕಳವಿಡಿದೊಂದೆ ನಾಡಿಯು ಸುಕ್ಕದಲೆ ಧಾರಾಳ ರೂಪದಿ ಸಿಕ್ಕಿಹುವು ನಡು ದೇಹದೊಳಗೆ ಸುಷಮ್ನನಾಮದಲಿ | ರಕ್ಕಸರನೊಳಪೊಗಗೊಡದೆ ದಶ ದಿಕ್ಕಿನೊಳಗೆ ಸಮೀರ ದೇವನು ಲೆಕ್ಕಿಸದೆ ಮತ್ತೊಬ್ಬರನು ಸಂಚರಿಪ ದೇಹದೊಳು ||೧೩||

ಇನಿತು ನಾಡೀ ಶಾಖೆಗಳು ಈ ತನುವಿನೊಳಗಿಹವೆಂದು ಏಕಾ ತ್ಮನು ದ್ವಿಸಪ್ತತಿ ಸಾವಿರಾತ್ಮಕನಾಗಿ ನಾಡಿಯೊಳು | ವನಿತೆಯಿಂದೊಡಗೂಡಿ ನಾರಾ ಯಣ ದಿವಾರಾತ್ರಿಯೊಳಗೀಪರಿ ವನಜಜಾಂಡದೊಳಖಿಳ ಜೀವರೊಳಿದ್ದು ಮೋಹಿಸುವ ||೧೪||

ದಿನದಿನದಿ ವರ್ಧಿಸುವ ಕುಮುದಾ ಪ್ತನ ಮಯೂಖದ ಸೊಬಗು ಗತಲೋ ಚನ ವಿಲೋಕಿಸಿ ಮೋದ ಪಡಬಲ್ಲನೆ ನಿರಂತರದಿ | ಕುನರಗೀ ಸುಕಥಾಮೃತ ಭೋ ಜನದ ಸುಖ ದೊರಕುವುದೇ ಲಕ್ಷ್ಮೀ ಮನೋಹರನ ಸದ್ಗುಣವ ಕೀರ್ತಿಪ ಭಕುತಗಲ್ಲದಲೆ ||೧೫||

ಈ ತನುವಿನೊಳಗಿಹವು ಓತ ಪ್ರೋತರೂಪದಿ ನಾಡಿಗಳು ಪುರು ಹೂತ ಮುಖರಲ್ಲಿಹರು ತಮ್ಮಿಂದಧಿಕರೊಡಗೂಡಿ | ಭೀತಿಗೊಳಿಸುತ ದಾನವರ ಸಂ ಧಾತನಾಮಕ ಹರಿಯ ಗುಣಸಂ ಪ್ರೀತಿಯಲಿ ಸದುಪಾಸನೆಯ ಗೈವುತಲಿ ಮೋದಿಪರು ||೧೬||

ಜಲಟ ಕುಕ್ಕುಟ ಖೇಟ ಜೀವರ ಕಳೇವರಗಳೊಳಿದ್ದು ಕಾಣಿಸಿ ಕೊಳದೆ ತತ್ತದ್ರೂಪ ನಾಮಗಳಿಂದ ಕರೆಸುತಲಿ | ಜಲರುಹೇಕ್ಷಣ ವಿವಿಧ ಕರ್ಮ ಗಳ ನಿರಂತರ ಮಾಡಿ ಮಾಡಿಸಿ ತತ್ತ ತ್ಫಲಗಳುಣ್ಣದೆ ಸಂಚರಿಸುವನು ನಿತ್ಯ ಸುಖಪೂರ್ಣ ||೧೭||

ತಿಳಿದುಪಾಸನೆಗೈವುತೀಪರಿ ಮಲಿನನಂತಿರು ದುರ್ಜನರ ಕಂ ಗಳಿಗೆ ಗೋಚರಿಸದೆ ವಿಪಶ್ಚಿತರೊಡನೆ ಗರ್ವಿಸದೆ | ಮಳೆ ಬಿಸಿಲು ಹಸಿ ತೃಷೆ ಜಯಾಪಜಯ ಖಳರ ನಿಂದಾನಿಂದೆ ಭಯಗಳಿ ಗಳುಕದಲೆ ಮದ್ದಾನೆಯಂದದಿ ಚರಿಸು ಧರೆಯೊಳಗೆ ||೧೮||

ಕಾನನ ಗ್ರಾಮಸ್ಥ ಸರ್ವ ಪ್ರಾಣಿಗಳು ಪ್ರತಿದಿವಸದಲಿ ಏ ನೇನು ಮಾಡುವ ಕರ್ಮಗಳು ಹರಿ ಪೂಜೆಯೆಂದರಿದು | ಧೇನಿಸುತ ಸದ್ಭಕ್ತಿಯಲಿ ಪವ ಮಾನ ಮುಖ ದೇವಾಂತರಾತ್ಮಕ ಶ್ರೀನಿವಾಸನಿಗರ್ಪಿಸುತ ಮೋದಿಸುತ ನಲಿವುತಿರು ||೧೯||

ನೋಕನೀಯನು ಲೋಕದೊಳು ಶುನಿ ಸೂಕರಾದಿಗಳೊಳಗೆ ನೆಲೆಸಿ ದ್ದೇಕಮೇವಾದ್ವಿತೀಯ ಬಹುರೂಪಾಹ್ವಯಗಳಿಂದ | ತಾ ಕರೆಸುತೊಳಗಿದ್ದು ತಿಳಿಸದೆ ಶ್ರೀ ಕಮಲಭವ ಮುಖ್ಯ ಸಕಲದಿ ವೌಕಸಗಣಾರಾಧ್ಯ ಕೈಕೊಂಡನುದಿನದಿ ಪೊರೆವ ||೨೦||

ಇನಿತುಪಾಸನೆ ಗೈಯುತಿಹ ಸ ಜ್ಜನರು ಸಂಸಾರದಲಿ ಪ್ರತಿಪ್ರತಿ ದಿನಗಳಲಿ ಏನೇನು ಮಾಡುವುದೆಲ್ಲ ಹರಿ ಪೂಜೆ | ಎನಿಸಿಕೊಂಬುದು ಸತ್ಯವೀ ಮಾ ತಿನಲಿ ಸಂಶಯ ಪಡುವ ನರನ ಲ್ಪನು ಸುನಿಶ್ಚಯ ಬಾಹ್ಯ ಕರ್ಮವ ಮಾಡಿ ಫಲವೇನು ||೨೧||

ಭೋಗ್ಯ ಭೋಕ್ತೃಗಳೊಳಗೆ ಹರಿ ತಾ ಭೋಗ್ಯ ಭೋಕ್ತನು ಎನಿಸಿ ಯೋಗ್ಯಾ ಯೋಗ್ಯ ರಸಗಳ ದೇವದಾನವಗಣಕೆ ಉಣಿಸುವನು | ಭಾಗ್ಯನಿಧಿ ಭಕ್ತರಿಗೆ ಸದ್ವೈ ರಾಗ್ಯ ಭಕ್ತಿ ಜ್ಞಾನ ವೀವಾ ಯೋಗ್ಯರಿಗೆ ದ್ವೇಷಾದಿಗಳ ತನ್ನಲ್ಲೆ ಕೊಡುತಿಪ್ಪ ||೨೨||

ಈ ಚತುರ್ದಶ ಭುವನದೊಳಗೆ ಚ ರಾಚರಾತ್ಮಕ ಜೀವರಲ್ಲಿ ವಿ ರೋಚನಾತ್ಮಜ ವಂಚಕನು ನೆಲೆಸಿದ್ದು ದಿನ ದಿನದಿ | ಯಾಚಕನು ಎಂದೆನಿಸಿಕೊಂಬ ಮ ರೀ ಚಿದಮನ ಸುಹಂಸರೂಪಿ ನಿ ಷೇಚಕಾಗಹ್ವಯನಾಗಿ ಜನರಭಿಲಾಷೆ ಪೂರೈಪ ||೨೩||

ಅನ್ನದನ್ನಾದನ್ನ ಮಯ ಸವಯ ಮನ್ನ ಬ್ರಹ್ಮಾದ್ಯಖಿಳ ಚೇತನ ಕನ್ನ ಕಲ್ಪಕನಾಹ ನನಿರುದ್ಧಾದಿ ರೂಪದಲಿ | ಅನ್ಯರನಪೇಕ್ಷಿಸದೆ ಗುಣ ಕಾ ರುಣ್ಯ ಸಾಗರ ಸೃಷ್ಟಿಸುವನು ಹಿ ರಣ್ಯಗರ್ಭನೊಳಿದ್ದು ಪಾಲಿಸುವನು ಜಗತ್ರಯವ ||೨೪||

ತ್ರಿಪದ ತ್ರಿದಶಾಧ್ಯಕ್ಷ ತ್ರಿಸ್ಥ ತ್ರಿಪಥ ಗಾಮಿನೀಪಿನ ತ್ರಿವಿಕ್ರಮ ಕೃಪಣ ವತ್ಸಲ ಕುವಲಯದಳ ಶ್ಯಾಮ ನಿಸ್ಸೀಮ | ಅಪರಿಮಿತ ಚಿತ್ಸುಖ ಗುಣಾತ್ಮಕ ವಪುಷ ವೈಕುಂಠಾದಿ ಲೋಕಾ ಧಿಪ ತ್ರಯಿಮಯ ತನ್ನವರ ನಿಷ್ಕಪಟದಿಂ ಪೊರೆವ ||೨೫||