ಅಂಗದಿಂದ ಲಿಂಗ ಹಿಂಗಬಾರದೆಂಬರು: ಅಂಗ ಲಿಂಗಸಂಬಂಧವಾದಲ್ಲಿ ಫಲವೇನು ಮನ ಲಿಂಗಸಂಬಂಧವಾಗದನ್ನಕ್ಕ ? ಕೂಡಲಚೆನ್ನಸಂಗಯ್ಯಾ ಮನದಿಂದಲೇನೂ ಘನವಿಲ್ಲಯ್ಯಾ.