ಒಂದೇ ರೂಪ ಎರಡು ಗುಣ

ವಿಕಿಸೋರ್ಸ್ದಿಂದ

ಹಾಡು - ಝಿಲಝಿಲನೆಂದು[ಸಂಪಾದಿಸಿ]

ಝಿಲಝಿಲನೆಂದು ಚಲಿಸುತ ಮುಂದು
ನದಿಯಿದು ಎಂದೂ ಹರಿಯುತಿದೆ ಎಲ್ಲಿಗೆ ?
ಗಿರಿಯನು ಇಳಿದು ಬಯಲಲಿ ನಡೆದು
ಇನಿಯನ ಅರಸಿ ಸಾಗರದ ಕಡೆಗೆ!

ನದಿಯಲ್ಲಿ ನೀರಾಡಿ ಓಡಿದೆ ತಂಗಾಳಿಯು ತಾನೆಲ್ಲಿಗೆ ?
ಕರಿಮೋಡ ಬಾನಿಂದ ಭೂಮಿಗೆ ಬಿತ್ತೆನ್ನುತ ಬಂತಿಲ್ಲಿಗೆ
ನಿನ್ನಯ ಕೂದಲಿನ ಈ ಮೋಡಿಗೆ!

ಮರದಿಂದ ಅದೇಕೆ ಉದುರಿದೆ ಹೂವೆಲ್ಲವು ಭೂಮಿಗಿಂದು?
ನಡೆದು ನೀ ಬಂದಾಗ ನಿನ್ನೀ ಪಾದ ನೊಂದೀತೆಂದು
ಹೂವಿನ ಹಾಸಿಗೆಯ ತಾ ಹಾಸಿದೆ !

ಇರುಳಂತೆ ನಮಗೆಲ್ಲ ಬೆಳಕಿನ ಸ್ವರೂಪವು ತಾನೇನಂತೆ ?
ಕಂಗಳಿಗೆ ಬೆಳಕು ರವಿ ಶಶಿ ಹೊಂದಾರೆಯು ದೀಪದಂತೆ
ಹೃದಯಕೆ ಪ್ರೇಮವದೇ ಹೊಂಬೆಳಕು!