ಪುಟ:KELAVU SANNA KATHEGALU.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಹೇಳುವುದು ಒಂದು ಮಾಡುವುದು ಮತ್ತೊಂದು, ಈ ನಡೆನುಡಿಗಳ ನಡುವಣ ವಿರಸದೂರವನ್ನು ಇರುಳಿನ ಕನಸು ಸಾಬೀತುಪಡಿಸುತ್ತದೆ. ಆತ್ಮಶೋಧನೆಯ ಕ್ಷಣದಲ್ಲಿ ಬಾಪೂಜಿ ಮಾತಿನ ಚಾಟಿಯಿಂದ ಬಡಿದಂತಾಗುತ್ತದೆ. ಶೋಧನೆ ಹಾಗೂ ಸಮೀಕ್ಷೆಯ ಲಹರಿಯಲ್ಲಿ ಕಥೆ ಮುಂದುವರಿಯುತ್ತದೆ. ಸ್ವಾತಂತ್ರದ ಕನಸು, ನಿರೀಕ್ಷೆ ಕೈಗೂಡದೆ ಹತಾಶೆ ಮಡಗಟ್ಟಿದ ಕ್ಷಣಗಳಲ್ಲಿ ಮೂಡಿದ ಭಾವನೆಗಳ ಪ್ರಕುಬ್ಧ ಸರೋವರವಾಗುತ್ತದೆ, ಆಯಕಟ್ಟಿನ ಜಾಗಗಳಲ್ಲಿ ಕುಳಿತ ಪ್ರಮುಖರು, ಮುಂದಾಳುಗಳು ವ್ಯವಸ್ಥೆಯೊಂದಿಗೆ ಷಾಮೀಲಾಗಿ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದನ್ನು ಹಲವು ತುಣುಕುಗಳಲ್ಲಿ ಕಥೆಗಾರರು ಪರಾಮರ್ಶಿಸಿದ್ದಾರೆ. ಯಾದವೀ ಕಲಹ, ಅಸ್ಪೃಶ್ಯತೆ, ವಿಧೇಯತೆಯ ಸೋಗು- ಇವು ಜೀವಂತವಾಗಿರುವಾಗ 'ಇಲ್ಲ, ಜಗತ್ತು ಇನ್ನೂ ಎಚ್ಚೆತ್ತಿಲ್ಲ' ಎಂಬ ತೀರ್ಮಾನ ಅನಿವಾದ್ಯವಾಗುತ್ತದೆ. ಬಿಡುಗಡೆಯ ಮಂಗಲ ಪ್ರಭಾತ ಬಯಸಿದರೆ ಅದಕ್ಕೆ ಪ್ರತಿಯಾಗಿ ದೊರೆತದ್ದು ಇದೇ ಏನು ಎಂದು ಚಿಂತಿಸ ತೊಡಗುತ್ತೇವೆ.

"ಎಣ್ಣೆ! ಚಿಮಿಣಿ ಎಣ್ಣೆ!” ಯುದ್ಧದ ಕರಾಳ ಹಸ್ತ ಎಷ್ಟು ಕ್ರೂರ ಎಂಬುದರ ಚಿತ್ರಣ. ಯುದ್ಧ ಭಸ್ಮಾಸುರ, ಗೋಳದ ಎಲ್ಲೋ ಮೂಲೆಯಲ್ಲಿ ಯುದ್ಧವಾದರೆ ಅದರ ಬಿಸಿ ಇಡೀ ಭೂಮಂಡಲಕ್ಕೆ ತಟ್ಟುತ್ತದೆ. ಆ ಪಾಪದ ಹೊರೆ ಯಾರ ಯಾರ ಹೆಗಲಿಗೋ ಸಾಗುತ್ತದೆ, ಸಂಬಂಧಪಟ್ಟಿರಲಿ, ಪಡದಿರಲಿ, ಎಲ್ಲರೂ ಬೆಲೆ ತೆರಬೇಕಾಗುತ್ತದೆ. ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತವೆ. ಸುಲಿಗೆ ಮಾಡುವವರಿಗೆ ಸುಗ್ಗಿ. ಉಂಡವನೇ ಜಾಣ. ಸಣ್ಣ ಸಂಸಾರಗಳು ನರಕಕೂಪಗಳಾಗಿ ಕೊಳೆಯುತ್ತವೆ. ಅಶಕ್ತರು ಹುಳುಗಳಂತೆ ಉದುರಿ ಹೋಗುತ್ತಾರೆ. ಯುದ್ಧ ರಾಕ್ಷಸನ ಬಕಾಸುರ ಹೊಟ್ಟೆಗೆ ಎಷ್ಟು ಬಿದ್ದರೂ ತುಂಬುವುದಿಲ್ಲ, ಯುದ್ಧದ ಕಪ್ಪು ನೆರಳಲ್ಲಿ ಮುಗ್ಧ ಸೋಮನ ಬಾಳು ಹೇಗೆ ಮುರುಟಿ ಹೋಗುತ್ತದೆಂಬುದು ಸಾಂಕೇತಿಕ ನಿದರ್ಶನ. ಅಂಥ ಎಷ್ಟೋ ಅಮಾಯಕರ ಬದುಕು ಮೂರಾಬಟ್ಟೆಯಾಗುತ್ತದೆ. ಸೋನು, ಅವನ ಮಗು ಯುದ್ಧದ ದಾಹಕ್ಕೆ ಎರಡು ಅಗಳು ಮಾತ್ರ. ಅರಳಬೇಕಾದ ಸಸಿಗಳು ಬಾಡುತ್ತವೆ. ದಾರುಣ ಘಟನೆಗಳು ಬಹುರೂಪಿಯಾಗಿ ಬಹು ವ್ಯಾಪಕವಾಗಿ ರಿಂಗಣ ಕುಣಿಯುತ್ತವೆ.

ಸೋಮ ವಂಚನೆಯ ಪರಿಚಯವೂ ಇರದ ಸಾದಾ ಸೀದಾ ಹಳ್ಳಿಯ ಮುಕ್ಕ. ಅವನ ಬಯಕೆಗಳು ತೀರಾ ಪರಿಮಿತ, ಪುಡಿಕಾಸುಗಳ ಸಂಪಾದನೆಯಿಂದ