ಕೆಂಡದ ಶವದಂತೆ, ಸೂತ್ರ

ವಿಕಿಸೋರ್ಸ್ದಿಂದ


Pages   (key to Page Status)   

ಕೆಂಡದ ಶವದಂತೆ
ಸೂತ್ರ ತಪ್ಪಿದ ಬೊಂಬೆಯಂತೆ
ಜಲವರತ ತಟಾಕದಂತೆ
ಬೆಂದ ನುಲಿಯಂತೆ ಮತ್ತೆ ಹಿಂದಣಂಗವುಂಟೆ ಅಣ್ಣಾ
ಚೆನ್ನಮಲ್ಲಿಕಾರ್ಜುನನಂಗವೆ ಆಶ್ರಯವಾದವಳಿಗೆ?