ಎನ್ನ ಅಂಗದಲ್ಲಿ ಆಚಾರವ ತೋರಿದನಯ್ಯಾ ಬಸವಣ್ಣನು. ಆ ಆಚಾರವನೆ ಲಿಂಗವೆಂದರುಹಿದನಯ್ಯಾ ಬಸವಣ್ಣನು. ಎನ್ನ ಪ್ರಾಣದಲ್ಲಿ ಅರಿವ ತೋರಿದನಯ್ಯಾ ಬಸವಣ್ಣನು. ಆ ಅರಿವೆ ಜಂಗಮವೆಂದರುಹಿದನಯ್ಯಾ ಬಸವಣ್ಣನು. ಚೆನ್ನಮಲ್ಲಕಾರ್ಜುನಯ್ಯಾ ಎನ್ನ ಹೆತ್ತತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯಾ ಪ್ರಭುವೆ.