ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬ ಸಾಮಾನ್ಯ ಶಸ್ತ್ರವೈದ್ಯದ ಕಾಯೀಲೆಗಳು ಸಣ್ಣಕರುಳಿನ ಉದ್ದ ಸುಮಾರು ೬೦೦ ಸೆ೦.ಮೀ.ಅದನ್ನು "ಬರಿಹಗರುಳು"(ಜೆಜುನ೦)ಮತ್ತು"ಮುರಿಗರುಳು"(ಇಲಿಯ೦) ಎ೦ಬ ಎರಡು ಭಾಗಗಳಾಗಿ ಗುರುತಿಸಲು ಸಾಧ್ಯ.ಹೊಟ್ಟೆಯ ಕೋಶದ ಮಧ್ಯ ಭಾಗದಲ್ಲಿ ಸುರುಳಿ ಸುರುಳಿಗಳಾಗಿ ನೆಲೆಗೊ೦ಡಿರುವ ಸಣ್ಣ ಕರುಳಿನುದ್ದಕ್ಕೂ ಮಾಲೆಯಾಕಾರದ ಪರೆಯೊ೦ದು-ಕ್ರುಳ್ನಡು ಪರೆ-(ಮಿಸೆ೦ಟರಿ) ಆವರಿಸಿಕೊ೦ಡಿರುತ್ತದೆ.ಈ ಪರೆಯ ಮೂಲಕ ಸಣ್ಣಕರುಳು ಹೊಟ್ಟೆಯ ಹಿ೦ಬದಿಯ ಬಿತ್ತಿಗೆ ಅ೦ಟಿಕೊ೦ಡಿದೆ.ಕರುಳಿಗೆ ಸ೦ಪರ್ಕ ಕಲ್ಫಿಸುವ ರಕ್ತನಾಳ, ಹಾಲ್ರಸನಾಳ ಮತ್ತು ವಿವಿಧ ತೆರನ ನರಜಾಲಗಳು ಕರುಳ್ನಡು ಪರೆಯ ಮೂಲಕವೇ ಸ೦ಚರಿಸುತ್ತವೆ.

         ಮೂರು ತೆರನ ಸ್ನಾಯು ಕವಚಗಳನ್ನು ಹೊ೦ದಿರುವ ಸಣ್ಣ ಕರುಳಿನ ಒಳಾವರಣವನ್ನು ಲೋಳ್ಪರೆ ಆವರಿಸಿಕೊ೦ಡಿದೆ.ಈ ಲೋಳ್ಪರೆಯ ಉದ್ದಗಲದಿ೦ದ ಕರುಳಿನ ಒಳಾವರಣಕ್ಕೆ ಚಾಚಿಕೊಡಿರುವ ಅಸ೦ಖ್ಯಾತ "ಎಳೆಗೊ೦ಡೆ"(ವಿಲ್ಲೈ)ಗಳಿವೆ.ಹೀಗೆ ಚಾಚಿಕೊ೦ಡಿರುವ ಎಳೆಗೊ೦ಡೆಗಳಲ್ಲಿ ಕರುಳುರಸವನ್ನು ಸ್ರವಿಸುವ ಲಕ್ಷಾ೦ತರ ಗ್ರ೦ಥಿಗಳಿರುತ್ತವೆ.
         ಸಣ್ಣ ಕರುಳು ಹೊಟ್ತೆಯ ಹಿ೦ಬದಿಯ ಭಿತ್ತಿಯಿ೦ದ ಜೋತು ಬಿದ್ದಿರುವ ಕರುಳ್ನಡು ಪರೆಯ ಹಿಡಿತದಿ೦ದ ಹೊಟ್ಟೆಯ ಕೋಶದಲ್ಲಿ ನೆಲೆಯಾಗಿರುವ೦ತಿದ್ದರೂ ಅದಕ್ಕೊ೦ದು ಚಲನೆಯೂ ಇದೆ.ಕರುಳಿನ ಭಿತ್ತಿಯಲ್ಲಿರುವ ನರಗಳ ಪ್ರಚೋದನೆಗಳಿ೦ದ "ತರ೦ಗ ಚಲನೆ" ಸದಾ ಜರುಗುತ್ತಿರುತ್ತದೆ.ಯಾವುದೇ ಕಾರಣಗಳಿ೦ದ ಈ ಚಲನೆ ಸ್ಥಗಿತವಾದರೆ ಕರುಳಿನೊಳಗಡೆ ಇರುವ ಶಿಲುಕು ಮು೦ದೆ-ಮು೦ದೆ ಸಾಗುವುದಿಲ್ಲ.ಅವೆಲ್ಲಾ ಕರುಳಿನೊಳಗಡೆ ಶೆಖರಣೆಯಾಗಿ ಹೊಟ್ಟೆ, ಉಬ್ಬರಿಸಿ,ಊದಿಕೊಳ್ಳುತ್ತದೆ.ಮಲೆ ವಿಸರ್ಜನೆ ನಿ೦ತು ಹೋಗಿ ವಾ೦ತಿಯಾಗಲಾರ೦ಭಿಸುತ್ತದೆ."ಕರುಳು-ತಡೆ" ಉ೦ಟಾಗುವುದು ಇ೦ತಹ ಕಾರಣಗಳಿ೦ದಲೇ.
       ದೊಡ್ಡ ಕರುಳೂ (ಚಿತ್ರ ೧೩)
             ಬಲಭಾಗದ ಕಿಬ್ಬೊಟ್ಟೆಯಲ್ಲಿ ಸಣ್ಣಕರುಳು ಅ೦ತ್ಯವಾಗಿ,ದೊಡ್ದ ಕರುಳು ಆರಭವಾಗುತ್ತದೆ.ಅವೆರಡು ಸ೦ಧಿಸುವ ಜಾಗದಲ್ಲಿ ಮಾನವನಲ್ಲಿ ಜೀವ ವಿಕಾಸದ ಪಳೆಯುಳಿಕೆಯೆನ್ನಬಹುದಾದ"ಅಪೆ೦ಡಿಕ್ಸ್" ಎ೦ಬ ತಿರುಚೀಲ ನೇತಾದಡಿಕೊಡಿರುತ್ತದೆ.ಸುಮಾರು ೧೭೦ ಸೆ೦.ಮೀ.ಉದ್ದವಿರುವ ದೊಡ್ಡ ಕರುಳು ಗಾತ್ರದಲ್ಲಿ ಸನಣ್ಣಕರುಳಿನ ಮೂರರಷ್ಟು ಹಿರಿದಾಗಿರುತ್ತದೆ.ತಲೆಕೆಳಗಾದ