ನಾವೂ ಮನುಷ್ಯರು!/ನಮ್ಮ ಮಾತು

ವಿಕಿಸೋರ್ಸ್ದಿಂದ


ನಾವೂ ಮನುಷ್ಯರು!

[ನಾಟಕ]




ನಿರಂಜನ


ಕನ್ನಡ ಸಂಘ

ಸಂತ ಫಿಲೋಮಿನಾ ಕಾಲೇಜು

ದರ್ಬೆ - 574 202, ಪುತ್ತೂರು, ದ‍ಇಣ ಕನ್ನಡ

NAAVU MANUSHYARU - A drama in Kannada by NIRANJANA Published by Kannada Sangha, St. Philomena College, Darbe - 574 202, Puttur, D. K.

First Impression : 1985 Pages : 4+xxiii + ೧೯ +5 Price : Rs. 6/-

(C) ಸೀಮಂತಿನೀ ನಿರಂಜನ

ಸಂಪಾದಕ ಮಂಡಳಿ : ವಿ.ಬಿ. ಮೊಳೆಯಾರ

ಪ್ರಧಾನ ಸಂಪಾದಕ

ಚೋಳಂತಕೋಡಿ ಈಶ್ವರ ಭಟ್ಟ

ವಿ. ಬಿ. ಅರ್ತಿಕಜೆ

ಹರಿನಾರಾಯಣ ಮಾಡಾವು

ಸಹಸಂಪಾದಕರು


ಬೆಲೆ: ರೂಪಾಯಿ ಆರು


ರಕ್ಷಾಪುಟದ ಕಲಾವಿದ:

ಮೋಹನ ಸೋನ

ಮುದ್ರಣ : ರಾಜೇಶ್ ಪವರ್ ಪ್ರೆಸ್

ದರ್ಬೆ -- 574 202

ಪುತ್ತೂರು, ದ. ಕನ್ನಡ, ಕರ್ನಾಟಕ

ನಮ್ಮ ಮಾತು

'‍ಚೈತನ್ಯ' ಮಾಲೆಯ ಮೂಲಕ ಹನ್ನೊಂದು ವಿವಿಧ ಪ್ರಕಾರಗಳ ಕೃತಿಗಳನ್ನೂ, ವಿಶೇಷ ಪ್ರಕಟಣೆಗಳ ರೂಪದಲ್ಲಿ ಎಂಟು ಕೃತಿಗಳನ್ನೂ ವಾಚಕರಿಗೆ ನೀಡಿ, ಕನ್ನಡದ ಕಾಯಕವನ್ನು ಪುತ್ತೂರಿನಲ್ಲಿ ಮಾಡುತ್ತ ಬಂದಿದ್ದೇವೆ. ನವಂಬರ್ ೩೦, ೧೯೮೫ರಂದು - ಕರ್ನಾಟಕ ಸಾಹಿತ್ಯ ಅಕಾಡೆವಿು, ಬೆಂಗಳೂರು. ಈ ಸಂಸ್ಥೆಯ - ನೆರವಿನಿಂದ ನಮ್ಮ ಕನ್ನಡ ಸ೦ಘವು ನಿರ೦ಜನ ಸಾಹಿತ್ಯದ ಕುರಿತು ವಿಚಾರಸಂಕಿರಣವನ್ನು ಏರ್ಪಡಿಸಲಿದೆ. ಈ ಸುಸಂದರ್ಭದಲ್ಲಿ ಖ್ಯಾತ ಸಾಹಿತಿ ನಿರಂಜನರ “ ನಾವೂ ಮನುಷ್ಯರು!” ಎ೦ಬ ಈ ನಾಟಕವನ್ನು ಪ್ರಕಟಿಸಿ ನಿಮ್ಮ ಕೈಯಲ್ಲಿರಿಸುತ್ತಿದ್ದೇವೆ.


ನಿರಂಜನರ ಬರವಣಿಗೆಗೆ ಬದುಕೇ ಮೂಲ. ಸಮತಾವಾದ, ಜನತಾ ರಂಗ ಭೂಮಿಗಳ ಕಾರ್ಯಕರ್ತರಾಗಿ ದುಡಿದ ಅವರಿಗೆ ಅವುಗಳ ಒಳಗುಹೊರಗು ಕರತಲಾಮಲಕ. ಬಡತನ, ಹಸಿವು, ಅಜ್ಞಾನ, ರೋಗರುಜಿನಗಳಿಂದ ನೊ೦ದು, ಬೇಯುತ್ತಿರುವ ಕಾರ್ಮಿಕರ, ನೇಕಾರರ ಬದುಕನ್ನು - ಸಂಘಟನೆಯನ್ನು - ಒಡೆಯಲು ಯತ್ನಿಸುತ್ತಿರುವ ಸ್ಥಾಪಿತ ಹಿತಾಸಕ್ತರ ಸಾರ್ಥಲಾಲಸೆ, ದರ್ಪ, ವಿಚ್ಛಿದ್ರಕಾರಕ ಕುಹಕತನಗಳು ಈ ನಾಟಕದಲ್ಲಿ ಸ್ಫುಟವಾಗಿವೆ. ದೀನ ದಲಿತರ ಬದುಕು ಬವಣೆಯ ಕತ್ತಲೆಯಿಂದ ಭರವಸೆಯ ಬೆಳಕಿನತ್ತ ಸಾಗಬೇಕೆಂಬ ಸ್ವಾತಂತ್ರ್ಯದ ಕ್ರಾಂತಿಯನ್ನು ನಿರಂಜನರು ಈ ನಾಟಕದಲ್ಲಿ ಧ್ವನಿಸಿದ್ದಾರೆ. ನಾಟಕಕ್ಕೆ ಪೂರಕವಾಗಿ ನೀಡಿದ ಬಣ್ಣದ ಬಯಲು, ಭಾರತೀಯ ಜನತಾರಂಗ ಭೂಮಿ ಲೇಖನಗಳು ನಾಟಕಸಾಹಿತ್ಯ ಮತ್ತು ರಂಗಭೂಮಿಯ ಆಸಕ್ತರಿಗೆ ಅಮೂಲ್ಯ ಕೊಡುಗೆಗಳಾಗಿವೆ. ಈ ನಾಟಕವನ್ನು ಪ್ರಕಟಣೆಗೆ ನೀಡಿ,ಪ್ರೋತ್ಸಾಹಿಸಿದ ಶ್ರೀ ನಿರ೦ಜನರಿಗೆ ಮತ್ತು ಪ್ರಕಟಣೆಗೆ ಸಮ್ಮತಿ ನೀಡಿದ ಕು| ಸೀಮಂತಿನೀ ನಿರಂಜನರಿಗೆ ಕೃತಜ್ಞತೆಗಳು.


ನಮ್ಮ ಕನ್ನಡ ಸಂಘದ ಸಂಚಾಲಕರಾದ ರೆ| ಫಾ| ಜೆ. ಬಿ. ಡಿ'ಸೋಜ ಮತ್ತು ಪದಾಧಿಕಾರಿಗಳಿಗೆ, ಸಂಪಾದಕ ಮಂಡಳಿಯ ಸದಸ್ಯರಿಗೆ, ರಕ್ಷಾಪುಟದ ಕಲಾವಿದ ಶ್ರೀ ಮೋಹನ ಸೋನರಿಗೆ, ಮಂಗಳೂರಿನ ಯಜ್ಞ'ರಿಗೆ, ರಾಜೇಶ್ ಪವರ್ ಪ್ರೆಸ್ಸಿನ ಎ೦. ಎಸ್. ರಘುನಾಥ ರಾವ್ ಮತ್ತು ಬಳಾಗದವರಿಗೆ- ನಮ್ಮ ನಮನಗಳು. ಕನ್ನಡ ಸಂಘದ ಸದಸ್ಯರಿಗೂ, ಸಾಹಿತ್ಯ - ಕಲಾಸಕ್ತರಿಗೂ ನಾವು ಆಭಾರಿಗಳು.

ಕನ್ನಡ ಸಂಘ,
ಸಂತ ಫಿಲೋಮಿನಾ ಕಾಲೇಜು
ದರ್ಬೆ-574202, ಪುತ್ತೂರು, ದ. ಕ.

ವಿ. ಬಿ. ಮೊಳೆಯಾರ
ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ