ಪುಟ:Yugaantara - Gokaak.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ೦ಕು ೧ ರುಕ್ಕಿಣಿದೇವಿ : ಹಾಗಲ್ಲ, ಕೋಸಲೇಂದ್ರ ! ನಮ್ಮ ಜೊತೆಗೆ ನೀನು ಮಾಹುವಿಗೆ ಬರಲಿರುವಿಯೆಂದು ನೆನಪಿಟ್ಟಿದ್ದು ನಮ್ಮ ಸುದೈವ, ಇಲ್ಲಿದೆ ಚಹ. ತೆಗೆದುಕೊಂಡು ಮೊದಲು ದಣುವಾರಿಸಿಕೊ ! [ ಕೂಸಲೇಂದ್ರ ಕುಳಿತು ಚಹ ತೆಗೆದು ಕೊಳ್ಳುತ್ತಾನೆ] ಕಾಂತಿಚಂದ್ರ : ಇವರು ಯಾರು ? ಕಿಶನ್ ಕಿಶೋರ : ಇವರು ಉದಿತೋದಿತ ಕವಿಗಳು, ದಿಲ್ಲಿಯ ಸಾಮಾಜಿಕ ಚಟುವಟಿಕೆಗಳಲ್ಲಿ ನನಗೆ ಸಹಜವಾಗಿ ಇವರ ಪರಿಚಯವಾಯಿತು. ಅದು ಈಗ ಸ್ನೇಹವಾಗಿ ಬೆಳೆದಿದೆ. ಕೋಸಲೇಂದ್ರರ ಹಿಂದೀ ಕವನಗಳನ್ನು ತಾವು ನೋಡಿರಬಹುದಲ್ಲ ? ಕಾಂತಿಚಂದ್ರ : ( ಸಂಕೋಚದಿಂದ) ಇಲ್ಲ ......... ನಾನಿನ್ನೂ ಸಾಹಿತ್ಯ ವನ್ನು ಹೆಚ್ಚಾಗಿ ಓದಿಕೊಂಡಿಲ್ಲ. ಇನ್ನು ಮೇಲೆ ನೋಡಬೇಕು ಎಂದಿದ್ದೇನೆ. ರೋಹಿಣಿದೇವಿ : ( ದಿಲ್ಲಿಯ ಕಿಲ್ಲೆ ' ಎಂಬ ಕವನವನ್ನು ಪ್ರಸಿದ್ದಿ ಸಿದ ಕಾಗಿ ನವಜೀವನ ವಾರಪತ್ರಿಕೆಯ ಠೇವು ಜಪ್ತಾಯಿತಲ್ಲ ? ಅದರ ಕರ್ತೃ ಇವರೇ ಎಂದು ಕಾಣುತ್ತದೆ ? ಕೋಸಲೇಂದ್ರಬಾಬು ಎಂಬ ಹೆಸರನ್ನು ಆ ಸಂಬಂಧದಲ್ಲಿ ನಾನು ಓದಿದ್ದೆ. ಕಾಂತಿಚಂದ್ರ : ಹೌದು ! ಸರಕಾರದ ಕಣ್ಣು ಒಂದೆರಡು ಸಲ ನನ್ನ ಮೇಲೆ - ಬಿದಿ ದೆ? ಮೃಣಾಲಿನಿ : ದಿಲ್ಲಿಯ ಕಿಲ್ಲೆ ಯಾಯಿತು; ರಾವಳಪಿಂಡಿಯ ಮೇಲೆ ಹಲ್ಲೆ - ಯಾಯಿತು ! ಸಂಕುಚಿತ ರಾಷ್ಟ್ರೀಯತೆ ಇಲ್ಲವೆ ಮುಗಿಲಿನಾಚೆಗೆ ರೆಕ್ಕೆ ಬಡಿಯುವ ಆಧ್ಯಾತ್ಮಿಯತೆ-ಈ ಎರಡು ವಿಷಯಗಳ ನಡುವೆ ಉಯ್ಯಾಲೆ ಯಂತೆ ನಮ್ಮ ಕವಿಗಳು ಹೊಯ್ದಾಡುತ್ತಾರೆ. (ಕಿಶನ್ ಕಿಶೋರರೆಡೆಗೆ ತಿರುಗಿ) ಇವರಂತಹ ಸ್ವಪ್ನ ಜೀವಿಗಳು ನಿಮ್ಮಂತಹ ಶ್ರೀಮಂತ ಧರ್ಮಾಂಧರಿಗೆ ಗಂಟುಬಿದ್ದಿರುವುದು ಸಹಜವಾಗಿದೆ. ಜೀವನರಂಗವನ್ನು ಎದುರಿಸದೆ ಹೆದರಿ ಜಾರಿಹೋಗುವ ನಿಮಂಥ ಆತ್ಮವಾದಿಗಳಿಗೆ ಇವರ ಸಹವಾಸವಲ್ಲದೆ ಮತ್ತಾರದು ರುಚಿಸೀತು ! [ ಕೆಣಕಿಸಿಕೊಂಡವರಂತೆ ಕಿಶನ್ ಕಿಶೋರ-ರುಕ್ಕಿಣಿದೇವಿಯವರು ಮೃಣಾಲಿನಿಯನ್ನು ನೋಡುವರು, ಕಾಂತಿಚಂದ್ರ-ರೋಹಿಣಿದೇವಿ ಯವರು ಗಾಬರಿಯಾಗುವರು.]