ಪುಟ:Yugaantara - Gokaak.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಭಾರ ಇವುಗಳ ಮೇಲೆಯೇ ಬಿದ೦ತೆ ಕಾಣುತ್ತದೆ. (ಕಿಶನ್ ಕಿಶೋರರೆಡೆಗೆ ತಿರುಗಿ) ನಡೆಯಿರಿ ! ಇನ್ನು ಹೋಗೋಣ, ಹೊತ್ತಾಗಿರಬಹುದು. ಕಿಶನ್ ಕಿಶೋರ : ನಮ್ಮ ಕೋಸಲೇಂದ್ರ ಇನ್ನೂ ಬರಲೇ ಇಲ್ಲವಲ್ಲ ? ರುಕ್ಕಿಣಿದೇವಿ : ಆ ನಿಮ್ಮ ಕೋಸಲೇಂದ್ರ ಕವಿ ಯಾವ ಮೂಲೆಯಲ್ಲಿ ಕವಿತೆ ಬರೆಯುತ್ತ ಕೂತಿದ್ದಾನೋ ! ಗಾಡಿ ವೇಳೆಗೆ ಸರಿಯಾಗಿ ಹೊರಟಿದ್ದರೆ ಇಷ್ಟೊತ್ತಿಗೆ ನಾವು ಮಥುರಾ ನಿಲ್ಮನೆಯ 4 ದಾಟುತ್ತಿದ್ದೆವು ! ಮೃಣಾಲಿನಿ : ನೀವು ಹೋಗುವದೆಲ್ಲಿಗೆ ? ರುಕ್ಕಿಣಿದೇವಿ : ( ತುಸು ಸಿಟ್ಟಿನಿಂದ) ಕಮಿಸಬೇಕು. ಮಾಹುವಿಗೆ ಹೋಗ ತೇವೆ. ನೀವಿರುವ ದಿಕ್ಕಲ್ಲ ಅದು. ನೀವು ಯೋಚನೆ ಮಾಡಬೇಕಾದುದಿಲ್ಲ. ಕಾಂತಿಚಂದ್ರ : ಮೃಣಾಲಿನಿ ! ಅವರು ಮಾಹುವಿಗೆ ಹೋಗಿ ಕೆಲವು ಕಾಲ ಧರ್ಮಸಾಧನೆಯಲ್ಲಿ ಕಳೆಯಬೇಕೆಂದಿದ್ದಾರೆ. ಸುಮ್ಮನಿರು. ಹಾಗೆ ಅಡ್ಡಡ್ಡ ಪ್ರಶ್ನೆ ಕೇಳಬಾರದು. ಮೃಣಾಲಿನಿ : ( ಆಶ್ಚರ್ಯದಿಂದ ) ಮಾಹುವಿಗೆ ! ಧರ್ಮಸಾಧನೆಗೋಸ್ಕರ ! “ಓಹೋ !!! [ ಇಷ್ಟರಲ್ಲಿ ಕೋಸಲೇಂದ್ರಶರ್ಮನು ಪ್ರವೇಶಿಸುತ್ತಾನೆ. ಒಂದು ನೆಹರು ಶರ್ಟು, ನಯವಾದ ಧೋತರ, ವಯಸ್ಸು ಇಪ್ಪತ್ತೆಂಟರ ಹೊರವೊಳಗೆ.] . ಕೋಸಲೇಂದ್ರ: (ನಗು) ಕ್ಷಮಿಸಬೇಕು, ಕಿಶನ್ ಕಿಶೋರಜಿ ! ವೇಳೆಗೆ ಸರಿಯಾಗಿ ಬರಬೇಕೆಂದು ಹೊರಟೆ. ಹಾದಿಯಲ್ಲಿ ಹರಿಜನ ಸಂಘದ ಕಾರ್ಯದರ್ಶಿ ಭೇಟಿಯಾಗಿ ಮಾತು ಬೆಳಿಸಿದ. ಮುಂದೆ ಬರುವಷ್ಟರಲ್ಲಿ ಒಂದು ಮಗು ದಾರಿ ತಪ್ಪಿಸಿಕೊಂಡು ರಸ್ತೆಯ ಮಧ್ಯದಲ್ಲಿ ನಡೆದಿತ್ತು. ಅಪಘಾತವಾದೀತೆಂದು ಅದನ್ನು ಮನೆಗೆ ಮುಟ್ಟಿಸುವಂತೆ ಪೋಲೀಸರ ಕೈಗೊಪ್ಪಿಸಿದೆ. ನಿಲ್ಮನೆಯ ಹತ್ತಿರ ಬಂದಾಗ ಅಲ್ಲಿ ಟಾಂಗಾದವರ ಜಗಳ ನಡೆದು ಕೈಗೆ ಕೈ ಹತ್ತಿತ್ತು. ಅಲ್ಲಿ ಮಧ್ಯಸ್ತಿಕೆ ಮಾಡಿದೆ. ಇಷ್ಟರಲ್ಲಿ ನೀವು ಹೋಗಿಬಿಟ್ಟರಬಹುದೆಂದು ತಿಳಿದಿದ್ದೆ. ಆದರೆ ಗಾಡಿ ತಡವಾಗಿದ್ದು ನನ್ನ ಸುದೈವ !