ಇಪ್ಪತ್ತೆ ೈದುಧರೆಯೊಳಗೆ ಮುಪ್ಪುರವಿಪ್ಪುದ ಕಂಡೆನಯ್ಯ. ಮುಪ್ಪುರದೊಳಗೆ ಸಪ್ತಸಾಗರ ಸುತ್ತಿ ಹರಿದು ಸರ್ವರ ತಲೆಯನೆತ್ತಲೀಸದು ನೋಡ. ಸಪ್ತಸಾಗರವನೊಂದು ಕಪ್ಪೆ ಕುಡಿದು ಸಪ್ತಸಾಗರವರತು ಕಪ್ಪೆ ಸತ್ತು ಇಪ್ಪತ್ತೆ ೈದು ಧರೆಯಳಿದು ಮುಪ್ಪುರ ಬೆಂದುದ ಕಂಡೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.