ಎನ್ನ ತನುವಿಂಗೆ ನೀನೊಡೆಯ ಎನ್ನ ಮನಕ್ಕೆಯೂ ನೀನೊಡೆಯ ಎನ್ನ ಧನಕ್ಕೆಯೂ ನೀನೊಡೆಯನಾದ ಬಳಿಕ ಎನ್ನರಿವು ನಿನ್ನದು ಎನ್ನ ಮರಹು ನಿನ್ನದು. ಕೂಡಲಸಂಗಮದೇವಾ `ಭೃತ್ಯಾಪರಾಧಃ ಸ್ವಾಮಿನೋ ದಂಡಃ ಎಂಬುದ ವಿಚಾರಿಸಿ ನೋಡಾ ಪ್ರಭುವೆ.