ಗುರುಭಕ್ತಿಯ ಮಾಡಬಹುದಲ್ಲದೆ
ಲಿಂಗಭಕ್ತಿಯ ಮಾಡಬಾರದು. ಲಿಂಗಭಕ್ತಿಯ ಮಾಡಬಹುದಲ್ಲದೆ
ಜಂಗಮಭಕ್ತಿಯ ಮಾಡಬಾರದು. ಜಂಗಮಭಕ್ತಿಯ ಮಾಡಬಹುದಲ್ಲದೆ
ಸಮಯಭಕ್ತಿಯ ಮಾಡಬಾರದು. ಸಮಯಭಕ್ತಿಯ ಮಾಡಬಹುದಲ್ಲದೆ
ಸಮಯ ಸಂತೋಷವ ಮಾಡಬಾರದು ಇವೆಲ್ಲವನು ಮಾಡಬಹುದಲ್ಲದೆ
ತನ್ನ ತಾನರಿಯಬಾರದು ! ತನ್ನ ತಾನರಿದೆಹೆನೆಂಬ ಅಹಂಕಾರವುಳ್ಳಡೆ ನಿಮ್ಮವರಿಗೆ ದೂರ. ಎಲೆ ದೇವಾ
ಅನ್ಯಕ್ಕೆ ಆಸೆ ಮಾಡಿದೆನಾದಡೆ ನಿಮ್ಮಾಣೆ
ನಿಮ್ಮ ಪ್ರಮಥರಾಣೆ ಕೂಡಲಸಂಗಮದೇವಾ.