ತನುವೇ ಭಾಂಡವಾಗಿ ಮನವೇ ಸುಯಿದಾನವಾಗಿ ಜ್ಞಾನಾಗ್ನಿಯಲೇ ಪದಾರ್ಥವ ಮಾಡೆ ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ಸ್ಪರ್ಶಮೂರ್ತಿಯು ನೀನೆ. ನಿನ್ನ ಪ್ರಸಾದಕ್ಕೆ ನಮೋ ನಮೋಯೆಂಬೆ ಕೂಡಲಚೆನ್ನಸಂಗಮದೇವಾ.