ನಾಥನು ಅನಾಥನು ಪುಣ್ಯನಾಥನು ಕರುಣಾಕರನೆಂಬ ಶಬ್ದಂಗಳ ಮನಕ್ಕೆ ತಾರದ ಪ್ರಸಾದಿ ಸ್ಥಾಪ್ಯಾಯನ ಸ್ತಂಭ ಆ ಎರಡರ ಅನ್ವಯವಳಿದ ಪ್ರಸಾದಿ ಅಂಗ ಲಿಂಗೈಕ್ಯವೆಂಬ ನುಡಿಯ ಹಂಗಿಲ್ಲದ ಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಾನೆನ್ನದ ಪ್ರಸಾದಿ.