ಸಮಯವಿರೋಧವಾದೀತೆಂದು ಪಾದಾರ್ಚನೆಯ ಮಾಡುವರಯ್ಯಾ. ಲಿಂಗಜಂಗಮಕ್ಕೆ ಪಾದವಾವುದು ? ಅರ್ಚನೆ ಯಾವುದು ? ಎಂಬ ತುದಿ ಮೊದಲನರಿಯರು. ಉದಾಸೀನದಿಂದ ಪಾದಾರ್ಚನೆಯ ಮಾಡಿ
ಪಾದೋದಕ ಧರಿಸಿದಡೆ ಅದೇ ಪ್ರಳಯಕಾಲಜಲ. ವರ್ಮವನರಿದು ಕೊಂಡಡೆ ತನ್ನ ಭವಕ್ಕೆ ಪ್ರಳಯಕಾಲಜಲ ! ಈ ಉಭಯವ ಭೇದಿಸಿ ಸಂಸಾರಮಲಿನವ ತೊಳೆವಡೆ ಕೂಡಲಚೆನ್ನಸಂಗಾ ಈ ಅನುವ ನಿಮ್ಮ ಶರಣ ಬಲ್ಲ.