ಜಲನಿಧಿಶಿಖರದ ನಡುವೊಂದು ದ್ರವ್ಯದ ತಳದಲ್ಲಿ ಶಿವಲೋಕ ಕೇಳಿರಣ್ಣಾ ! ದ್ರವ್ಯಪಾಕದಲ್ಲಿ ತಮ್ಮ ಸುಖವನರಿಯದೆ ಶಿವಲೋಕದೊಳಗೆ ಬಳಲುತ್ತಿರ್ದರೆಲ್ಲಾ. ದ್ರವ್ಯಶುದ್ಧ ಪಾಕಶುದ್ಧ ಕೂಡಲಚೆನ್ನಸಂಗನ ಪ್ರಸಾದಿಗೆ.