ಗುರು ಮುಟ್ಟಿ ಗುರುವಾಯಿತ್ತು ಲಿಂಗಮುಟ್ಟಿ ಲಿಂಗವಾಯಿತ್ತು ಜಂಗಮ ಮುಟ್ಟಿ ಜಂಗಮವಾಯಿತ್ತು ಪ್ರಸಾದ ಮುಟ್ಟಿ ಪ್ರಸಾದವಾಯಿತ್ತು ಪ್ರಸಾದ ಪರವಸ್ತು ಪರದಲ್ಲಿಪ್ಪುದಾಗಿ ಇನ್ನು ಪ್ರಸಾದವ ಮುಟ್ಟಬೇಕೆಂಬವರ ಮುಖವ ನೋಡಲಾಗದು ಕೂಡಲಚೆನ್ನಸಂಗಯ್ಯಾ.