ಜಂಗಮವೆಂದು ಪಾದಪ್ರಕ್ಷಾಲನವ ಮಾಡಿ

ವಿಕಿಸೋರ್ಸ್ದಿಂದ



Pages   (key to Page Status)   


ಜಂಗಮವೆಂದು ಪಾದಪ್ರಕ್ಷಾಲನವ ಮಾಡಿ ಉನ್ನತಾಸನದಲ್ಲಿ ಮೂರ್ತಮಾಡಿಸಿ ವಿಶ್ವಾಸದಿಂದ ಪಾದತೀರ್ಥವ ಪಡಕೊಂಡು- ಆ ಸಮಯದಲ್ಲಿ ಆ ಜಂಗಮದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಆ ತೀರ್ಥವ ಬಿಡಲಾಗದು. ಅದೆಂತೆಂದಡೆ: ತಾ ಭಾವಿಸಲು ತೀರ್ಥವಾಯಿತ್ತು
ಆ ಭಾವವ ಬಿಟ್ಟಡೆ ಅದು ನೀರೆನಿಸಿತ್ತು. ಇದು ಸಕಲಮಾಹೇಶ್ವರರಿಗೂ ಸನ್ಮತ. ಅಶೀಲವ್ರತಿಗಳಾದಡೆ
ಪಾದೋದಕ ತ್ಯಾಗವ ಮಾಡುವುದಯ್ಯಾ. ಅದೆಂತೆಂದಡೆ: ಪ್ರಕ್ಷಾಲಿತಂ ಚ ಪಾದಾಂಬು ಜಂಗಮೋ ಲಿಂಗವರ್ಜಿತಃ ಪಾದೋದಕಂ ತ್ಯಜೇತ್ ಜ್ಞಾನೀ ಇದಂ ಮಾಹೇಶಸಮ್ಮತಂ ಆ ಸಮಯದಲ್ಲಿ ಲಿಂಗವಿದ್ದಡೆ
ಆ ತೀರ್ಥವ ಅರ್ಪಿಸಿ ಸಲಿಸುವುದು. ಬೇರೆ ತೀರ್ಥವ ಪಡಕೊಳಲಾಗದು
ಕೂಡಲಚೆನ್ನಸಂಗಯ್ಯಾ ನಿಮ್ಮಾಣೆ