ನಾನಿಹ ಪರಿಯಂತರ ನೀನುಂಟು ; ನೀನಿಹ ಪರಿಯಂತರ ನಾನುಂಟು. ನಾನು ನೀನೆಂಬುಭಯದ ಸಂದು ಹೂಳಿದ ಬಳಿಕ ಇನ್ನೇನುಂಟು ಹೇಳಾ ಅಖಂಡೇಶ್ವರಾ ?