ಕಾಯವಿಲ್ಲದ ಭಕ್ತ ಭಕ್ತ,

ವಿಕಿಸೋರ್ಸ್ದಿಂದ



Pages   (key to Page Status)   


ಕಾಯವಿಲ್ಲದ ಭಕ್ತ
ಜೀವವಿಲ್ಲದ ಭಕ್ತ
ಭಾವವಿಲ್ಲದ ಭಕ್ತ
ಅಖಂಡೇಶ್ವರಾ
ನಿಮ್ಮನೊಡಗೂಡಿದ ಮಹಾಭಕ್ತನು ಉಪಮೆಗೆ ಉಪಮಾತೀತನು ನೋಡಾ.