ಆದಿಯಾಧಾರವಿಲ್ಲದ ಮುನ್ನ
ನಾದಬಿಂದುಕಳೆಗಳಿಲ್ಲದ ಮುನ್ನ
ಭೇದಾಭೇದ ಬ್ರಹ್ಮಾಂಡಕೋಟಿಗಳಿಲ್ಲದ ಮುನ್ನ
ಬಸವನೆಂಬ ಬೀಜದ ಮಧ್ಯದಲ್ಲಿ ಲಿಂಗವೆಂಬ ಅಂಕುರ ಉದಯವಾಯಿತ್ತು. ಆ ಲಿಂಗಾಂಕುರವೆ ಸಕಲತತ್ವ ತೋರಿಕೆಯೆಂಬ ಶಾಖೆ ಪರ್ಣಂಗಳು ಪಸರಿಸಿ
ವೃಕ್ಷ ಪಲ್ಲವಿಸಿತ್ತು
ಇಂತಪ್ಪ ಚಿದ್‍ಬ್ರಹ್ಮವೃಕ್ಷವೆಂಬ ಪರಮಗುರು ಸಂಗನಬಸವಣ್ಣನ ಶ್ರೀಪಾದಕಮಲದಲ್ಲಿ ಭ್ರಮರನಾಗಿರಿಸಯ್ಯಾ ಅಖಂಡೇಶ್ವರಾ.