ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚತಂತ್ರ ಕಥೆಗಳು, ನಾನೇಹೊರತು ಬೇರೊಬ್ಬನುಂಟೇ ?-ಎಂದು ಬಹಳ ಹೊತ್ತು ನನ್ನನ್ನು ಪೀಡಿಸಿ, ನನಗಿಂತ ಅಧಿಕನು ಯಾರು, ಬೇಗಹೋಗಿ ಅವ ನನ್ನು ತನಗೆ ತಂದು ತೋರಿಸೆಂದು ನನ್ನ ಕೈಯಲ್ಲಿ ಪ್ರಮಾಣಮಾಡಿಸಿ ಕೊಂಡು ಈಗ ನನ್ನನ್ನು ಬಿಟ್ಟಿತು. ಈ ಸುದ್ದಿಯನ್ನು ತಮಗೆ ಅರಿಕೆ ಮಾಡಬೇಕೆಂದು ಬಹು ತರೆಯಾಗಿ ಸನ್ನಿಧಾನಕ್ಕೆ ಬಂದೆನು. ಇನ್ನು ಮೇಲೆ ಅದು ನಿಮ್ಮ ಬಳಿಗೆ ಬರುವ ಮೃಗಗಳನ್ನು ಬಿಡದು. ಇಂದು ನಾನು ಪಟ್ಟ ಶ್ರಮವನ್ನು ಏನೆಂದು ಹೇಳಲಿ ? ಎಂದು ನುಡಿದಿತು. ಆ ಮಾತಿಗೆ ಸಿಂಹವು ಬಹಳ ರೌದ್ರಾಕಾರದಿಂದ ಮೊಲವನ್ನು ನೋಡಿಆನಿಂಹವನ್ನು ನನಗೆ ತೋರಿಸು-ಎಂದಿತು. “ಸ್ವಾಮಿ, ನಾನು ಅದನ್ನು ತೋರಿಸುತ್ತೇನೆ. ನೀವೀಗಲೇ ಹೊರಡಬೇಕು ಎಂದು ಮೊಲವು ಹೇಳಿತು, "ಎಲಾ, ನೀನು ತರೆಯಾಗಿ ನನಗೆ ಮುಂಚೆ ನಡೆದು ಹಾದಿ ತೋರಿಸು '-ಎಂದು ಸಿಂಹವು ಗರ್ಜಿಸುತ್ತಾ ನಡೆಯಿತು. ಮೊಲವು ಅತಿ ವೇಗವಾಗಿ ಮುಂದೆ ಓಡುತ್ತಾ ನಿಂಹವನ್ನು ಬಹುದೂರ ಕರೆ ದುಕೊಂಡುಹೋಗಿ, ಮುಂಚೆ ತಾನು ನೋಡಿ ಬಂದ ಅಗಾಧವಾದ ಬಾವಿಯ ಹತ್ತಿರ ನಿಂತುಕೊಂಡು, --ಎಲೈ ಮೃಗರಾಜನೇ, ಇಗೊ ನಿನ್ನ ಶತ್ರುವಾದ ಸಿಂಹದ ಹತ್ತಿರಕ್ಕೆ ಬಂದು ನೋಡು, ನಿನಗೆ ಅವನು ಕಾಣಬರುತ್ತಾನೆ ಎಂದು ಇಣಿಕಿ ನೋಡಿಸಿತು. ಆಗ ಸಿಂಹವು ಬಾವಿಯ ನೀರಿನಲ್ಲಿ ಪ್ರತಿಫಲಿಸಿದ ತನ್ನ ದೇಹವನ್ನು ನೋಡಿ ಅದು ಮತ್ತೊಂದು ಸಿಂಹವೆಂದು ಭ್ರಮಿಸಿ ಬಾವಿಯಲ್ಲಿ ದುಮುಕಿ ತತ್ಯ ಇವೇ ಮೃತವಾ ಯಿತು. ಆದುದರಿಂದ ಎಷ್ಟು ಬಲವಂತನಾದರೂ ಬುದ್ದಿ ಬಲದಿಂದ ಜಯಿ ಸಬಹುದೆನಲು, ಕೇಳಿ ಕರಟಕನು ನಿನಗೆ ಕಾರೈಸಿದ್ದಿ ಯಾಗುವುದು ಹೋಗು ಎಂದು ಹೇಳಿದನು. Damanaka bears tales to Pingalaka against Sanjivaka, ಆ ಮೇಲೆ ದಮನಕನು ಪಿಂಗಳಕನ ಹತ್ತಿರಕ್ಕೆ ಹೋಗಿ ನಮಸ್ಕ ರಿಸಿ ನಾನು ನಿಮಗೆ ಅತ್ಯಂತ ಅಪರಾಧಮಾಡಿದೆನು, ಈ ಅಪರಾಧ