98 ಪಂಚತಂತ್ರ ಕಥೆಗಳು, ಬುದ್ದಿಶ್ಯಸ್ಯ ಬಲಂ ತಸ್ಯ ನಿರೋಧಸ್ಯ ಕುತೋ ಬಲಂ | ಪ ಸಿಂಹೋ ಮದೋನ್ಮತ್ತ ಕೃಶಕೇನ ನಿಪಾತಿತಃ || ಬಲವಿಲ್ಲದವನಾದರೂ ಬುದ್ದಿವಂತನಾದರೆ ಅವನೇ ಬಲಾಧಿಕನು, ಬಲವುಳವನಾದರೂ ಬುದ್ಧಿಹೀನನಾದರೆ ಅವನ ಬಲವು ನಿಪ್ಪಲವು. ಅಲ್ಪಜಂತುವಾದ ಮೊಲವು ಮಹತ್ತಾದ ಸಿಂಹವನ್ನು ಉಪಾಯದಿಂದ ಕೊಂದಿತು, ಮೊಲದ ಬಲವನ್ನು ನೋಡಿದೆಯಾ ?" ಎನಲು, ಕರ ಟಕನು- ಆ ಕಥೆಯನ್ನು ನಾನು ಕೇಳಬೇಕು ಹೇಳು ' ಎಂದನು. ದಮನಕನು ಹೇಳುತ್ತಾನೆ. The Lion Madotkata and the Hare. ಒಂದು ವನದಲ್ಲಿ ಮದೋತ್ಕಟವೆಂಬ ಹೆಸರುಳ್ಳ ಒಂದು ಸಿಂಹವು ಸೇರಿ ಅಲ್ಲಿಯ ಸಮಸ್ತವಾದ ಜಂತುಗಳನ್ನೂ ಹಿಡಿದುಕೊಂಡು ಭಹಿ ಸುತ್ತಿದ್ದಿತು. - ಆ ವನದಲ್ಲಿ ಹುಲಿಗಳು ಚಿರತೆಗಳು ಹಂದಿಗಳು ಕೊಣ ಗಳು ಸಾರಂಗಗಳು ಹುಲ್ಲೆಗಳು ಮೊಲಗಳು ಮುಂತಾದ ನಾನಾಬಗೆ ಯ ಜಂತುಗಳಲ್ಲಾ ಅದಕ್ಕಂಜಿ ಗುಂಪು ಕೂಡಿ ನಿಂಹದ ಬಳಿಗೆ ಬಂದು ಬಹು ದೀನತ್ನದಿಂದ ಪಾದಕ್ಕೆರಗಿ,-ಎಲೈ ಮೃಗೇಂದ್ರನೇ, ಈ ಕಾಡಿನಲ್ಲಿ ಚಿರಕಾಲದಿಂದ ವಾಸವಾಗಿರುವ ನಾವೆಲ್ಲರೂ ನಿಮಗೊಂದು ಬಿನ್ನಹ ವನ್ನು ಮಾಡಿಕೊಳ್ಳುವುದಕ್ಕೆ ಬಂದೆವು. ಏನೆಂದರೆ, ನೀವು ಕೋಪದಿಂದ ಮೃಗಗಳನ್ನೆಲ್ಲಾ ಒಂದೇಸಾರಿಯಾಗಿ ಕೊಲ್ಲಬೇಡಿ, ನಾವು ಸರದಿಯ ಪ್ರಕಾರ ನೀವಿರುವ ಸ್ಥಳಕ್ಕೆ ಒಂದೊಂದು ಮೃಗವಾಗಿ ಬಂದು ನಿಮ್ಮ ಹಸಿವನ್ನು ತೀರಿಸುವಂತೆ ಆಲೋಚಿಸಿಕೊಂಡಿದ್ದೇವೆ; ಇದಕ್ಕೆ ನೀವು ಸಮ್ಮತಿಸಿ ನಮ್ಮ ಭಯವನ್ನು ಬಿಡಿಸಬೇಕು ಎಂದು ಸಿಂಹದೊಡನೆ ಹೇಳಲಾಗಿ, ಸಿಂಹವು ಒಪ್ಪಿ-ನಿಮಗೆ ಅಭಯವನ್ನು ಕೊಟ್ಟೆನು, ಸುಖ ವಾಗಿ ಬಾಳಿರಿ-ಎಂದು ಮೃಗಗಳನ್ನು ಕಳುಹಿಸಿತು. ಬಳಿಕ ಮೃಗಗಳು ತಮ್ಮ ತಮ್ಮ ಸರದಿಯ ಪ್ರಕಾರ ಸೂರೋದಯಕಾಲಕ್ಕೆ ದಿನಂಪ್ರತಿ ಒಂದರ ಮೇರೆಗೆ ನಿಂಹದ ಬಳಿಗೆ ಹೋಗುತ್ತಿದ್ದುವು. ಅದನ್ನು ಸಿಂಹವುಳಸಿ ಹಸಿವು ತೀರಿಸಿಕೊಳ್ಳುತ್ತಾ ಬಹುಕಾಲ ಕಳಯಿತು,
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೪೬
ಗೋಚರ