ಮರುಳ ಕಂಡ ಕನಸಿನ ಪರಿಯಂತೆ ಶಿವಾಚಾರ ಕರಿಯು ಕನ್ನಡಿಯೊಳಗಡಗಿದಂತಯ್ಯಾ ! ಗುಣಿ ಅವಗುಣಿಯೊಡನಾಡಿದಡೆ ಅದೆ ಆತನ ಕರ್ಮದ ಫಲ ನೋಡಾ ! ಕೂಡಲಸಂಗನ ಶರಣರ ಅನುಭಾವ ಭವದುಃಖಿಗಳಿಗೆ ವೇದ್ಯವಾಗದಯ್ಯಾ.