ಬಾಳತ್ವಕ್ಕೆಂದು ಮಧುವ ತಂದು ಕೊಡನ ತುಂಬಿದ ಜೇನಹುಳುವಿನಂತೆ ತಾನುಂಬುದು ತನ್ನೆಂಜಲ ಜಗವುಂಬುದು ನೋಡಯ್ಯಾ. ಶಿವಭಕ್ತನಾಗಿ ಶಿವಾನ್ನವನೆ ಕೊಂಡು ಒಕ್ಕಮಿಕ್ಕ ವಸ್ತುವ ಜಂಗಮಕ್ಕಿಕ್ಕುವಾತನೆ ಭಕ್ತ ಕೊಂಡಾತನೆ ಜಂಗಮ. ನಡುವೆ ನೀ ಬಂದು ಭಂಡು ಮಾಡದಿರೈ ಕೂಡಲಸಂಗಮದೇವಾ.