ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಧಕ

ವಿಕಿಸೋರ್ಸ್ದಿಂದ

ಅಂಧಕ[ಸಂಪಾದಿಸಿ]

ಒಬ್ಬ ರಾಕ್ಷಸ, ತಂದೆ ಕಶ್ಯಪ, ತಾಯಿ ಮಹಾಭಾರತದ ಪ್ರಕಾರ ದಿತಿ, ಮತ್ಸ್ಯಪುರಾಣದ ಪ್ರಕಾರ ದನು. ಶಿವನಿಂದ ಹತನಾದ ಎಂದು ಭಾರತವೂ ವಿಷ್ಣುಪುರಾಣವೂ ಮಹಾಲಕ್ಷ್ಮಿಯಿಂದ ಹತನಾದ ಎಂದು ಮಾರ್ಕಂಡೇಯ ಪುರಾಣವೂ ತಿಳಿಸುತ್ತವೆ. ಶಿವನೊಡನೆ ಹೋರಾಡಿ ಕೊನೆಯಲ್ಲಿ ಅವನನ್ನೇ ಮೊರೆ ಹೊಕ್ಕು ಪ್ರಮಥಗಣದಲ್ಲಿ ಒಬ್ಬನಾದನೆಂದು ಮತ್ಸ್ಯಪುರಾಣ ತಿಳಿಸುತ್ತದೆ.