ಅಯ್ಯ ! ಶ್ವೇತ
ಪೀತ
ಹರಿತ
ಮಾಂಜಿಷ*
ಕಪೋತ
ಮಾಣಿಕ್ಯ
ಹಂಡಬಂಡ
ಚಿತ್ರ ವಿಚಿತ್ರ
ಮೊದಲಾದ ಪಶುಗಳ ಮಧ್ಯದಲ್ಲಿ ಕ್ಷೀರ !; ಕ್ಷೀರ ಮಧ್ಯದಲ್ಲಿ ದಧಿ
ತಕ್ರ
ನವನೀತ
ಘೃತ
ರುಚಿ
ಚೇತನವಡಗಿರ್ಪಂತೆ
ಸಿಂಪಿಯ ಮಧ್ಯದಲ್ಲಿ ಚಿಜ್ಜಲ ಸ್ವಾತಿಮಿಂಚಿನ ಪ್ರಕಾಶಕ್ಕೆ ಘಟ್ಟಿಗೊಂಡು ಜಲರೂಪವಳಿದು ನಿರಾಕಾರವಾಗಿರ್ಪಂತೆ ಸಮಸ್ತ ಬೀಜಮಧ್ಯದಲ್ಲಿ ವೃಕ್ಷಂಗಳಡಗಿರ್ಪಂತೆ ವೃಕ್ಷಂಗಳ ಮಧ್ಯದಲ್ಲಿ ಬೀಜಂಗಳಡಗಿರ್ಪಂತೆ ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಗೋಪ್ಯವಾಗಿರ್ದು ಸಮಸ್ತ ಕುಲ_ಛಲ_ಮತಭ್ರಮಿತಂಗಳಿಂದ ತೊಳಲುವ ವೇದಾಂತಿ_ಸಿದ್ಧಾಂತಿ_ಭಿನ್ನಯೋಗಿ ಮೊದಲಾದ ಅದ್ವೈತಜಡಾತ್ಮರ ಕಣ್ಣಿಂಗೆ ಅಗೋಚರವಾಗಿರ್ಪುದು ನೋಡ ! ನಿರವಯಶೂನ್ಯಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.